More

    ಸಖತ್​ ಸದ್ದು ಮಾಡುತ್ತಿದೆ ಉರ್ಫಿಯ ಈ ಹೊಸ ಅವತಾರ!

    ಮುಂಬೈ: ಹಿಂದಿ ಬಿಗ್​ ಬಾಸ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದ ಉರ್ಫಿ ಜಾವೇದ್​ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.

    ವಿಭಿನ್ನವಾದ ಬಟ್ಟೆಗಳನ್ನು ಧರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಉರ್ಫಿಗೆ ಇತ್ತೀಚಿಗೆ ಮುಂಬೈನ ಪ್ರಸಿದ್ದ ರೆಸ್ಟೋರೆಂಟ್​ನಲ್ಲಿ ಪ್ರವೇಶವನ್ನು ನಿರಾಕರಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

    ಹೊಸ ಫೋಟೋಶೂಟ್​

    ಇನ್ನು ಈ ನಟಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು ಅವರ ಈ ಹೊಸ ಫೋಟೋ ಸಾಮಾಜಿಕ ಜಾಲತಾಣಗಳ್ಲಲಿ ವೈರಲ್​ ಆಗಿದ್ದು ಇದು ಯಾವ ರೀತಿಯ ಸ್ಟೈಲ್​ ಎಂದು ನೆಟ್ಟಿಗರು ಬೆರಗಾಗಿದ್ದಾರೆ.

    ಇತ್ತೀಚಿಗೆ ರೆಸ್ಟೋರೆಂಟ್​ಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಸುದ್ದಿಯಾಗಿದ್ದ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡು ಕಿಡಿಕಾರಿದ್ದರು ಮತ್ತು #Zomato ಎಂದು ಬಳಸಿದ್ದರು.

    urfi

    ಇದನ್ನೂ ಒದಿ: VIDEO| ಬಣ್ಣ ಹಚ್ಚುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಆರೋಪಿ ಶಿಕ್ಷಕನ ಬಂಧನ

    ಒಂದು ಗಿಫ್ಟಿನ ಕಥೆ

    ಇನ್ನು ತಮಗೆ ರೆಸ್ಟೋರೆಂಟ್​ನಲ್ಲಿ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ನಟಿ ಜೊಮ್ಯಾಟೋ ಮೂಲಕ ಊಟವನ್ನು ಆರ್ಡರ್​ ಮಾಡಿ ತರಿಸಿಕೊಂಡಿದ್ದರು. ಇದೇ ವೇಳೆ ಜೊಮ್ಯಾಟೋ ಉರ್ಫಿಗೆ ಉಡುಗೊರೆ ಒಂದನ್ನು ನೀಡಿದೆ.

    ನಿಮ್ಮ ಝೊಮ್ಯಾಟೊ ಗೋಲ್ಡ್‌ ಡೈನಿಂಗ್‌ ಕಾರ್ನಿವಲ್‌ ನಡೆಯುತ್ತಿದ್ದ ಹೋಟೆಲ್‌ನಲ್ಲಿ ನನಗೊಂದು ಸೀಟ್‌ ಸಿಕ್ಕಿಲ್ಲ. ಬೇಸರವಾಗಿದೆ’ ಎಂದು ಉರ್ಫಿ ಝೊಮ್ಯಾಟೊ ಸಂಸ್ಥೆ ಅವರಿಗೆ ಮೆಸೇಜ್ ಮಾಡಿದ್ದರು. ಒಂದೇ ನಿಮಿಷದಲ್ಲಿ ಪ್ರತಿಕ್ರಿಯೆ ನೀಡಿದ ಸಂಸ್ಥೆ ‘ದಯವಿಟ್ಟು ನಮ್ಮನ್ನು ಕ್ಷಮಿಸಬೇಕು ಮೇಡಂ ಎಂದು ಸಂಸ್ಥೆ ಪ್ರತಿಕ್ರಿಯಿಸಿತ್ತು.

    ಕ್ಷಮೆ ಕೇಳುವುದರ ಜೊತೆಗೆ ನಾವು ನಿಮಗೊಂದು ಗಿಫ್ಟ್‌ ಬ್ಯಾಸ್ಕೆಟ್‌ ಕಳುಹಿಸಿ ಕೊಡುತ್ತೀವಿ ಎಂದು ಬ್ಯಾಸ್ಕೆಟ್‌ ತುಂಬಾ ತಿನಿಸು ತುಂಬಿರುವ ಫೋಟೋಗಳನ್ನು ಕಳುಹಿಸಿದ್ದಾರೆ. ಅಲ್ಲಿಗೆ ಸುಮ್ಮನಾಗದ ಉರ್ಫಿ ತಮ್ಮ ಕ್ರಿಯೇಟಿವಿಟಿ ಬಳಸಿದ್ದಾರೆ.

    ವಿಭಿನ್ನ ಉಡುಗೆ

    ಇನ್ನು ತಮಗೆ ಬಂದ ಉಡುಗೋರೆಯ ಬುಟ್ಟಿ ಹಾಗೂ ಜೊಮ್ಯಾಟೋ ಸಂಸ್ಥೆಯ ಲೇಬಲ್​ ಅನ್ನು ಮೈಗೆ ಸುತ್ತಿಕೊಂಡು ಉರ್ಫಿ ಫೋಟೋಶೂಟ್​ ಮಾಡಿಸಿದ್ದಾರೆ.

    ಇದಕ್ಕೆ ನಟಿ ಯಾರದ್ದೋ ಬ್ಯಾಸ್ಕೆಟ್​ನಿಂದ ಮತ್ಯಾರೋ ಬಟ್ಟೆ ಎಂದು ಪೋಟೋಗೆ ಅಡಿಬರಹವನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಸಂಯುಕ್ತಾ ಹೆಗ್ಡೆ ಸೂಪರ್​ ಕ್ರಿಯೇಟಿವಿಟಿ ಎಂದು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts