

ಚೆನೈ: ಬಿಜೆಪಿ ಮುಖಂಡರೊಬ್ಬರನ್ನು ಅಪರಿಚಿತರ ತಂಡವೊಂದು ಅಡ್ಡಗಟ್ಟಿ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಶ್ರೀ ಪೆರಂಬೂರು ಬಳಿಯ ನಜರತ್ಪೇಟೆ ಬಳಿ ನಡೆದಿದೆ.
ಶ್ರೀಪೆರಂಬೂರು ಸಮೀಪದ ವಲರಪುರಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ.ಜಿ. ಶಂಕರ್(42) ಕೊಲೆಯಾಗಿರುವವರು.
ತಮಿಖಳುನಾಡು ಬಿಜೆಪಿ ಎಸ್‌ಸಿ-ಎಸ್‌ಟಿ ವಿಭಅಗದ ರಾಜ್ಯ ಖಜಾಂಜಿ ಆಗಿರುವ ಶಂಕರ್ ಕಾರ್ಯಕ್ರಮ ಒಂದನ್ನು ಮುಗಿಸಿಕೊಂಡು ಮನೆಗೆ ಹಿಂಇತುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಪೂನಮಲ್ಲೆ ಹೆದ್ದಾರಿಯ ನಸರತ್‌ಪೇಟೆ ಸಿಗ್ನಲ್ ಬಳಿ ಕಾರು ಬಂದಾಗ ಏಕಾಏಕಿ ಶಂಕರ್ ಅವರ ಕಾರನ್ನು ಅಡ್ಡಗಟ್ಟಿದ ಆಗಂತುಕರು ಕಾರಿನ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದಾರೆ. ಗಾಬರಿಗೊಂಡ ಶಂಕರ್ ಕಾರಿಂದ ಇಳಿದು ಓಡಿ ಹೋಗಿದ್ದು ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ ಹತ್ಯೆ ಮಾಡಿ ಪರಾರಿಯಾಗಿದ್ಧಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ನಸರತ್‌ಪೇಟೆ ಪೊಲೀಸರು ಮೃತ ಶಂಕರ್ ವಿರುದ್ಧ ಈ ಹಿಂದೆ 15 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಘಟನೆ ನಡೆದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮಾಡಲಾಗಿದ್ದು ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಲರಪುರಂ ಪಂಚಾಯತ್ ಕೌನ್ಸಿಲ್ ಅಧ್ಯಕ್ಷ ಮತ್ತು ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ರಾಜ್ಯ ಖಜಾಂಚಿ ಪಿಪಿಜಿ ಶಂಕರ್ ಅವರನ್ನು ಸಮಾಜ ವಿರೋಧಿಗಳು ಕೊಂದಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಯಿತು. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.