ಮದುವೆಯಾಗಲು ನಿರಾಕರಣೆ; ಯುವತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಗಲ್​ ಪ್ರೇಮಿ

Crime
Published on

ಭೋಪಾಲ್​: ಯುವತಿ ಒಬ್ಬಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಧಾರ್​ ನಗರದಲ್ಲಿ ಘಟನೆ ನಡೆದಿದ್ದು ಮೃತ ದುರ್ದೈವಿ ಹೆಸರು ಪೂಜಾ(22) ಎಂದು ತಿಳಿದು ಬಂದಿದ್ದು ಆರೋಪಿ ದೀಪಕ್​ ರಾಥೋಡ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗು ಎಂದು ಪೀಡಿಸುತ್ತಿದ್ದ

ಆರೋಪಿ ದೀಪಕ್​ ರಾಥೋಡ್​ ಕಳೆದ ಎರಡು ವರ್ಷಗಳಿಂದ ಮೃತ ಪೂಜಾಳನ್ನು ಹಿಂಬಾಲಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದನ್ನು ನಿರಾಕರಿಸಿದ್ದ ಯುವತಿ ಆರೋಪಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಳು.

ಬ್ರಹ್ಮಕುಂಡ್​ ಪ್ರದೇಶದಲ್ಲಿ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸವಿದ್ದ ಯುವತಿ ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಯುವತಿಯ ಚಲನವಲನದ ಮೇಲೆ ನಿಗಾ ವಹಸಿಸಿದ್ದ ಆರೋಪಿಯೂ ಗುರುವಾರ ಬೆಳಗ್ಗೆ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ಧಾನೆ.

MP Murder

ಯುವತಿ ಪೂಜಾ ಆರೋಪಿ ದೀಪಕ್​ ವಿರುದ್ಧ ಕಿರುಕುಳದ ದೂರನ್ನು ದಾಖಲಿಸಿದ್ದಳು. ಇದಕ್ಕೆ ಕುಪಿತಗೊಂಡಿದ್ದ ಆರೋಪಿ ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.

ಪೊಲೀಸರ ಮೇಲೆ ದಾಳಿ

ಇನ್ನು ಧಾರ್​ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ದೀಪಕ್​ ತನ್ನ ಮನೆಯಲ್ಲಿ ಅವಿತುಕೊಂಡಿರುವ ಬಗ್ಗೆ ಮಾಹಿತಿಯನ್ನು ಪಡೆದಿದ್ಧಾರೆ.

ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ದೀಪಕ್​ ಅಧಿಕಾರಿಗಳ ಮೇಲೆ ಗನ್​ನಿಂದ ಶೂಟ್​ ಮಾಡಿದ್ದು ಈ ವೇಳೆ ಓರ್ವರಿಗೆ ಗಾಯ ಆಗಿದೆ. ಆರೋಪಿಯ ಕಾಲಿಗೆ ಗುಂಡೇಟು ನೀಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆ ಧ್ವಂಸ

ಇನ್ನು ಆರೋಪಿ ದೀಪಕ್​ ಬಂಧನದ ಬೆನ್ನಲ್ಲೇ ಆತನ ಮನೆಯನ್ನು ಪೊಲೀಸರು ಹಾಗೂ ಸ್ಥಳೀಯಾಡಳಿತದ ಅಧಿಕಾರಿಗಳು ನೆಲಸಮ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅಧಿಕಾರಿ ಒಬ್ಬರು ದೀಪಕ್ ಅವರ ಮನೆ ಸಾರ್ವಜನಿಕರ ಸ್ವತನ್ನು ಅತಿಕ್ರಮಣ ಮಾಡಿ ಕಟ್ಟಲಾಗಿರುವ ಕಾರಣ ಮನೆಯನ್ನು ನೆಲಸಮ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net