More

    ಬಿಜೆಪಿ ಪಾಲಿಗೆ ಈಶ್ವರಪ್ಪ ಅಂದು ಅರ್ಜುನ ಇಂದು ಭೀಷ್ಮ: ಅಣ್ಣಾಮಲೈ

    ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರು ಮತಬೇಟೆಯಲ್ಲಿ ತೊಡಗಿದ್ದು ವಿಭಿನ್ನ ಕಸರತ್ತಿಗೆ ಕೈ ಹಾಕಿದ್ದಾರೆ.

    ಇನ್ನು ಶಿವಮೊಗ್ಗ ನಗರದ ಎನ್​ಇಎಸ್ ಮೈದಾನದಲ್ಲಿ ತಮಿಳು ಭಾಂದವರ ಸಮಾವೇಶ ಆಯೋಜಿಸುವ ಮೂಲಕ ಬಿಜೆಪಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ಧಾರೆ.

    ಭೀಷ್ಮರಾಗಿ ಬದಲಾಗಿದ್ದಾರೆ

    ಇನ್ನು ಸಮಾವೇಶವನ್ನು ದಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ 50 ವರ್ಷದ ಹಿಂದೆ ಯಡಿಯೂರಪ್ಪ, ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸಂಘಟನೆ ಕೆಲಸ ಮಾಡಿದ್ದರು. ಇವತ್ತು ಆ ಕೆಲಸ‌ವನ್ನು ತಮಿಳುನಾಡಿನಲ್ಲಿ ನಾನು ಮಾಡುತ್ತಿದ್ದೇನೆ.

    ಹಿಂದೆ ಸಂಘಟನಾ ಕುರುಕ್ಷೇತ್ರದಲ್ಲಿ ಅರ್ಜುನನಾಗಿದ್ದ ಈಶ್ವರಪ್ಪ ಇವತ್ತು ಭೀಷ್ಮರಾಗಿ ಬದಲಾಗಿದ್ದಾರೆ. ಅರ್ಜುನನಂತೆ ಕೆಲಸ ಮಾಡಿ, ಭೀಷ್ಮ ಹಾಗೂ ಕೃಷ್ಣನಾಗಿ ಬದಲಾಗೋದು ಸುಲಭವಲ್ಲ. ಈಶ್ವರಪ್ಪರ ಕಾರ್ಯವನ್ನು ಪ್ರಧಾನಿ ಮೋದಿಯವರೇ ಶ್ಲಾಘಿಸಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

    KSE

    ಇದನ್ನೂ ಓದಿ: ಪಾರ್ಕಿಂಗ್​ ಸ್ಲಿಪ್​ ತಡವಾಗಿ ನೀಡಿದ್ದಕ್ಕೆ ಕೋಪ; ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ

    ಭಾಷಣದ ವೇಳೆ ತಮಿಳು ಬಳಕೆ

    ಕರ್ನಾಟಕ- ತಮಿಳುನಾಡು ನಡುವೆ ಸಾವಿರಾರು ವರ್ಷಗಳ ಬಾಂಧವ್ಯವಿದೆ ಈಶ್ವರಪ್ಪ ಅವರು ಯಾವಾಗಲೂ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಇರುತ್ತಾರೆ. ಇಲ್ಲಿಂದ ಪ್ರತಿ ವರ್ಷ ಸಾವಿರಾರು ಜನರನ್ನು ಓಂ ಶಕ್ತಿ ದೇವರಿಗೆ ದರ್ಶನಕ್ಕೆ ಕಳುಹಿಸಿಕೊಡ್ತಾರೆ. ಇದನ್ನು ಅವರು ರಾಜಕೀಯ ಲಾಭಕ್ಕಾಗಿ ಮಾಡಿದ್ದಲ್ಲ ದೈವಭಕ್ತಿಗೆ ಮಾಡಿದ್ದು ಎಂದು ತಮಿಳಿನಲ್ಲಿ ಮಾತನಾಡುತ್ತ ಬಣ್ಣಿಸಿದ್ದಾರೆ.

    ಚುನಾವಣಾ ರಾಜಕೀಯದಿಂದ ಈಶ್ವರಪ್ಪ ಹಿಂದೆ ಸರಿದಿದ್ದಾರೆ ನೀವು ಚೆನ್ನಬಸಪ್ಪ ಅವರನ್ನು ಗೆಲ್ಲಿಸಿದರೇ, ಈಶ್ವರಪ್ಪರನ್ನು ಗೆಲ್ಲಿಸಿದಂತೆ ನೀವು ಹಾಕುವ ವೋಟ್ ಈಶ್ವರಪ್ಪರಿಗೆ ಧನ್ಯವಾದ ಸಲ್ಲಿಸುವ ವೋಟ್ ಆಗುತ್ತೆ. ಜೋಡೆತ್ತಿನಂತೆ ಕೆಲಸ ಮಾಡಿದ ಯಡಿಯೂರಪ್ಪ, ಈಶ್ವರಪ್ಪ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ.

    ಬಹುಮತದ ಸರ್ಕಾರ ಬಂದಿಲ್ಲ

    ಇನ್ನು ಕರ್ನಾಟಕದಲ್ಲಿ ಬಿಜೆಪಿಗೆ ಒಮ್ಮೆಯೂ ಬಹುಮತದ ಸರ್ಕಾರ ಬಂದಿಲ್ಲ ಕಿಚಡಿ ಸರ್ಕಾರ ಬಂದರೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತೆ. ಹೀಗಾಗಿ ರಾಜ್ಯದ ಜನರು ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕು ಡಬ್ಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಗೆ ವೇಗ ನೀಡುತ್ತಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ನದ್ದು ರಿವರ್ಸ್ ಇಂಜಿನ್ ಮಾದರಿ ಕಳೆದ ಮೂರು ತಿಂಗಳಲ್ಲಿ ಅವರ ನಾಯಕರು ಏನು ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಕೇವಲ ಬಿಜೆಪಿ ಯೋಜನೆ ನಿಲ್ಲಿಸುತ್ತೇವೆ, ಹಿಂಪಡೆಯುತ್ತೇವೆ, ಹೆಸರು ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ.

    ಜಾತಿ ಹೆಸರಿಟ್ಟುಕೊಂಡು ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಪ್ರಚಾರ ಮಾಡ್ತಾ ಇದ್ದಾರೆ. ಅದರೆ,, ಮುಂದಿನ 5 ವರ್ಷ ನಾವು ಏನು ಮಾಡ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದೇವೆ. ರಾಜ್ಯದಲ್ಲಿ ಈ ಬಾರಿ 130 ಕ್ಕೂ ಅಧಿಕ ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಮಾವೇಶದಲ್ಲಿ ಮಾತನಾಡುವ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts