ಪಾರ್ಕಿಂಗ್​ ಸ್ಲಿಪ್​ ತಡವಾಗಿ ನೀಡಿದ್ದಕ್ಕೆ ಕೋಪ; ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ

delhi mall
Published on

ನವದೆಹಲಿ: ಪಾರ್ಕಿಂಗ್​ ಸ್ಲಿಪ್​ ನೀಡುವಲ್ಲಿ ಸ್ವಲ್ಪ ತಡವಾಗಿದ್ದಕ್ಕೆ ಬೈಕ್​ ಸವಾರ ಹಾಗೂ ಮಾಲ್​ನ ಸೆಕ್ಯೂರಿಟಿ ಗಾರ್ಡ್​ ನಡುವೆ ಮಾರಮಾರಿ ಹೊಡೆದಾಟ ಆಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ ಪೂರ್ವ ಭಾಗ ಆನಂದ್​ ವಿಹಾರ್​ ಪ್ರದೇಶದಲ್ಲಿ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ತಡ ಮಾಡಿದ್ದಕ್ಕೆ ಹಲ್ಲೆ

ಸದ್ಯ ವೈರಲ್​ ಆಗಿರುವ ದೃಶ್ಯದಲ್ಲಿ ಬೈಕ್​ ಸವಾರನ ಹೆಸರು ಹರ್ವೀಂದರ್​ ಎಂದು ತಿಳಿದು ಬಂದಿದ್ದು ಹಲ್ಲೆಗೆ ಒಳಗಾದ ಸೆಕ್ಯೂರಿಟಿ ಗಾರ್ಡ್​ ಹೆಸರು ಕೃಷ್ಣಪಾಲ್​ ಎಂದು ತಿಳಿದು ಬಂದಿದೆ.

ಘಟನೆ ಸದ್ಯ ಪೊಲೀಸ್​ ಸ್ಟೇಷನ್​ ಮೆಟ್ಟಿಲೇರಿದ್ದು ಬೈಕ್​ ಸವಾರ ಹಾಗೂ ಸೆಕ್ಯೂರಿಟಿ ಗಾರ್ಡ್​ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net