More

    ಕುಡಿಯುವುದಕ್ಕೆ ಹಣ ಕೊಡಲು ನಿರಾಕರಣೆ; ಇಟ್ಟಿಗೆಯಿಂದ ತಂದೆಯನ್ನು ಹತ್ಯೆ ಮಾಡಿದ ಮಗ

    ಬೆಂಗಳೂರು: ತನಗೆ ಕುಡಿಯಲು ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ವಿಜಯನಗರದ ಮಾರೇನಹಳ್ಳಿಯ ಪಿಎಸ್​ ಬಡಾವಣೆ ನಿವಾಸಿಯಾದ ಬಸವರಾಜು(60) ಮೃತ ದುರ್ದೈವಿ. ಪೈಂಟರ್​ ಹಾಗೂ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಗ ನೀಲಾಧರ(30) ಕೊಲೆ ಆರೋಪಿ.

    ಇಟ್ಟಿಗೆಯಿಂದ ಹಲ್ಲೆ

    ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಸವರಾಜುರನ್ನು ಏಪ್ರಿಲ್​ 10ರಂದು ಮಗ ನೀಲಾಧರ ಕುಡಿಯಲು ಹಣ ಕೇಳಿದ್ದಾನೆ. ಇದಕ್ಕೆ ಒಪ್ಪದ ತಂದೆಯನ್ನು ಮಗ ಇಟ್ಟಿಗೆಯಿಂದ ಅಮಾನುಷವಾಗಿ ಹೊಡೆದು ಕೊಲೆ ಮಾಡಿದ್ದಾನೆ.

    ಘಟನೆ ನಡೆದ ಎರಡು ದಿನಗಳ ಬಳಿಕ ಬಸವರಾಜು ವಾಸವಿದ್ದ ಶೆಡ್​ನಿಂದ ವಾಸನೆ ಬರಲು ಆರಂಭಿಸಿದ ನಂತರ ನೆರೆಹೊರೆಯವರು ಪರಿಶೀಲಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರ ಪತ್ನಿ ಇಂದ್ರಮ್ಮ ಅವರಿಗೆ ಪತಿಯ ಸಾವಿನ ಮಾಹಿತಿಯನ್ನು ತಿಳಿಸಿದ್ದಾರೆ.

    murder

    ಇದನ್ನೂ ಓದಿ: ಪಾರ್ಕಿಂಗ್​ ಸ್ಲಿಪ್​ ತಡವಾಗಿ ನೀಡಿದ್ದಕ್ಕೆ ಕೋಪ; ಸೆಕ್ಯೂರಿಟಿ ಗಾರ್ಡ್​ ಮೇಲೆ ಹಲ್ಲೆ

    ಮಿಂಚಿನ ಕಾರ್ಯಾಚರಣೆ

    ಇನ್ನು ಪ್ರಕರಣ ದಾಖಲಿಸಿಕೊಂಡ ಗೋವಿಂದರಾಜನಗರ ಪೊಲೀಸರು ಬಸವರಾಜು ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದಕ್ಕೂ ಮುನ್ನ ಪಕ್ಕೆಲುಬುಗಳು ಮುರಿದಿರುವುದು ಹಾಗೂ ಮುಖದ ಮೇಲೆ ಗಾಯದ ಕಲೆಗಳನ್ನು ಗಮನಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು.

    ಇದೇ ವೇಳೆ ಮಗ ನೀಲಾಧರ ತನ್ನ ತಂದೆಯನ್ನು ಕೊಲೆ ಮಾಡಿರುವ ಕುರಿತು ಅಕ್ಕನ ಬಳಿ ಹೇಳಿಕೊಂಡಿದ್ದಾನೆ. ಇದನ್ನು ಯಾರಿಗಾದರೂ ಹೇಳಿದರೆ ನಿನ್ನ ಹಾಗೂ ಅಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆತನ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

    ಸಿಟ್ಟಿನಿಂದ ಕೃತ್ಯ

    ಈ ವೇಳೆ ಪೊಲೀಸರು ನೀಲಾಧರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡು ಇಟ್ಟಿಗೆಯಿಂದ ತನ್ನ ತಂದೆಯ ಎದೆ ಭಾಗಕ್ಕೆ ಹೊಡೆದಿದ್ಧಾಗಿ ಬಾಯ್ಬಿಟ್ಟಿದ್ಧಾನೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts