More

    ವರುಣಾದಲ್ಲಿ ಕಾಂಗ್ರೆಸ್​ನ ಹತಾಶ ಕೃತ್ಯಗಳಿಗೆ ಬಿಜೆಪಿ ಬಗ್ಗಲ್ಲ: ಅಶ್ವತ್ಥನಾರಾಯಣ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಮಧ್ಯೆ ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

    ಇನ್ನು ರಾಜ್ಯದ ಹೈ ವೋಲ್ಟೇಜ್ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ವರುಣಾದಲ್ಲಿ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರ ನಡುವಿನ ಹೊಡೆದಾಟದ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ ಸಿಡಿಮಿಡಿಗೊಂಡಿದ್ದಾರೆ.

    ನಾವು ಯಾವುದಕ್ಕೂ ಬಗ್ಗುವುದಿಲ್ಲ

    ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡನೀಯ. ಕಾಂಗ್ರೆಸ್ ನ ಹತಾಶ ಕೃತ್ಯಗಳಿಗೆ ಪಕ್ಷ ಹೆದರುವುದಿಲ್ಲ, ಬಗ್ಗುವುದಿಲ್ಲ. ವ್ಯವಸ್ಥಿತ ಷಡ್ಯಂತ್ರ ಹೂಡಿ ಕಲ್ಲು ತೂರಾಟ ಮಾಡಿದ್ದಾರೆ. ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಗದ್ದಲವೆಬ್ಬಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

    ವರುಣಾದಲ್ಲಿ ಕಾಂಗ್ರೆಸ್​ನ ಹತಾಶ ಕೃತ್ಯಗಳಿಗೆ ಬಿಜೆಪಿ ಬಗ್ಗಲ್ಲ: ಅಶ್ವತ್ಥನಾರಾಯಣ

    ಇದನ್ನೂ ಓದಿ: ಸ್ವಸ್ಥ ಭಾರತಕ್ಕಾಗಿ `ಮನ್ ಕಿ ಬಾತ್’ ಮೂಲಕ ಜನರ ಪ್ರೇರೇಪಣೆ

    ಇಂತಹ ಕೃತ್ಯ ಎಸಗಿದವರು ಕಾನೂನು ಪ್ರಕಾರ ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ‌. ಬಿಜೆಪಿಯೊಡ್ಡಿದ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದ ಮತಗಳ ಮೂಲಕ ಉತ್ತರಿಸುವ ಬದಲು ಕಲ್ಲು ತೂರಿ ಬೆದರಿಸಲು ಪ್ರಯತ್ನಿಸಿದೆ. ಸೋಲುವ ಭೀತಿಯಿಂದ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಹಾಸ್ಯಾಸ್ಪದ

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಶಿಕ್ಷಣ ನೀತಿ ರದ್ದು ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವುದು ಹಾಸ್ಯಾಸ್ಪದ. ಅಧಿಕಾರಕ್ಕೆ ಬರುವುದಿಲ್ಲ. ಎನ್ ಇಪಿ ರದ್ದಾಗುವುದಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts