More

    ಹೆದ್ದಾರಿ ಮಧ್ಯೆ ಬೃಹತ್ ಹೋರ್ಡಿಂಗ್; ಸಾರ್ವಜನಿಕರ ಸುರಕ್ಷತೆಯನ್ನು ಮರೆತ ಬಿಬಿಎಂಪಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೌಂದರ್ಯವನ್ನು ಕುರೂಪಗೊಳಿಸುವ ಜಾಹೀರಾತು ಫಲಕಗಳಿಗೆ ಕಡಿವಾಣ ಹಾಕಬೇಕಿದ್ದ ಬಿಬಿಎಂಪಿ ರಾತ್ರೋ ರಾತ್ರಿ ಹೆದ್ದಾರಿ ಮಧ್ಯದ ಮಿಡಿಯನ್‌ನಲ್ಲಿ (ರಸ್ತೆ ವಿಭಜಕ) ಬೃಹತ್ ಹೋರ್ಡಿಂಗ್ ಪ್ರದರ್ಶಿಸಲು ಒಪ್ಪಿಗೆ ನೀಡಿ ಅಚ್ಚರಿ ಮೂಡಿಸಿದೆ.

    ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಜಾಹೀರಾತನ್ನು ಪ್ರದರ್ಶಿಸಲು ಅವಕಾಶ ಇಲ್ಲ. ಆದರೂ, ಪಾಲಿಕೆ ಅಧಿಕಾರಿಗಳು ಜಾಹೀರಾತು ನೀತಿಗೆ ವಿರುದ್ಧವಾಗಿ ಹೆದ್ದಾರಿ ಮಧ್ಯೆಯೇ ಹೋರ್ಡಿಂಗ್ ಹಾಕಲು ಅವಕಾಶ ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಜತೆಗೆ ಚುನಾವಣೆ ವೇಳೆ ಈ ವಿಷಯದ ಬಗ್ಗೆ ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಖಾಸಗಿ ಕಂಪನಿ ಮೂಲಕ ಹೋರ್ಡಿಂಗ್ಸ್‌ನಲ್ಲಿ ಜಾಹೀರಾತು ಪ್ರದರ್ಶಿಸಿ ವಾಮಮಾರ್ಗದಲ್ಲಿ ಹಣ ಮಾಡುವ ದಂಧೆಗೆ ನೀರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಸೈನೇಜ್ ನೆಪದಲ್ಲಿ ಹೋರ್ಡಿಂಗ್ಸ್‌ಗೆ ಅವಕಾಶ?

    ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಯಲಹಂಕ ಪೊಲೀಸ್ ಠಾಣೆಯಿಂದ ನಾಗೇನಹಳ್ಳಿ ಗೇಟ್‌ವರೆಗಿನ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಪುಟ್ಟೇನಹಳ್ಳಿ ಬಿಎಂಟಿಸಿ ಬಸ್ ಡಿಪೋ ಮುಂದೆ ಹಾದುಹೋಗಿರುವ ರಸ್ತೆಯಲ್ಲಿ 6 ಹೋರ್ಡಿಂಗ್ಸ್ ಮೇಲೆದ್ದಿವೆ.

    ಈ ರಸ್ತೆ ಜಾಹೀರಾತು ನೀತಿ ಅನ್ವಯ ‘ಡಿ’ ವಲಯಕ್ಕೆ ಸೇರಿದ್ದು, ಹೆದ್ದಾರಿ ಬದಿ ಕೆಲ ಷರತ್ತಿನೊಂದಿಗೆ ಕೆಲವೆಡೆ ಮಾತ್ರ ಹೋರ್ಡಿಂಗ್ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಹೆದ್ದಾರಿ ಮಧ್ಯಯೇ ಹೋರ್ಡಿಂಗ್ಸ್ ಅಳವಡಿಸಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

    BBMP Hoarding

    ಇದನ್ನೂ ಓದಿ: ಆಯುರ್ವೇದ ವೈದ್ಯರು ಎಂಬಿಬಿಎಸ್‌ ವೇತನಕ್ಕೆ ಅರ್ಹರಲ್ಲ: ಸುಪ್ರೀಂ ಕೋರ್ಟ್​

    ಏಕೆಂದರೆ ಇಡೀ ಬೆಂಗಳೂರಿನಲ್ಲಿ ರಸ್ತೆ ಮಧ್ಯದ ಮೀಡಿಯನ್ ಬೃಹತ್ ಹೋರ್ಡಿಂಗ್ ಅಳವಡಿಸಿರುವುದು ಇಲ್ಲಿ ಮಾತ್ರ. ಈಗಾಗಲೇ ಈ ಹೆದ್ದಾರಿಯ ಮೀಡಿಯನ್‌ನಲ್ಲಿ ಸೈನೇಜ್ (ಸಣ್ಣ ಪ್ರಮಾಣದ ಜಾಹೀರಾತು ಲಕ) ಅಳವಡಿಸಲು ಹಿಂದೆಯೇ ಒಪ್ಪಿಗೆ ನೀಡಲಾಗಿದೆ. ಈ ಒಪ್ಪಿಗೆಯನ್ನೇ ಬೃಹತ್ ಹೋರ್ಡಿಂಗ್ಸ್‌ಗೂ ಅನ್ವಯಿಸಿ ಅಧಿಕಾರಿಗಳು ಅಕ್ರಮವಾಗಿ ಅನುಮತಿ ನೀಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಅಪಘಾತ ಸಂಭವಿಸಿದರೆ ದುರಂತ ನಿಶ್ಚಿತ

    ಬಿಬಿಎಂಪಿ ಜಾಹೀರಾತು ಬೈಲಾ ತಿದ್ದುಪಡಿ ಪ್ರಕಾರ ವಾಹನ ಚಾಲಕರನ್ನು ದಿಕ್ಕುತಪ್ಪಿಸುವ ಹಾಗೂ ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ಯಾವುದೇ ರೂಪದಲ್ಲಿ ಜಾಹೀರಾತು ಲಕ ಪ್ರದರ್ಶಿಸುವುದುನ್ನು ನಿಷೇಧಿಸಲಾಗಿದೆ. ಆದರೆ, ಯಲಹಂಕದ ಪುಟ್ಟೇನಹಳ್ಳಿ ಹೆದ್ದಾರಿಗುಂಟ 6 ಕಡೆಗಳಲ್ಲಿ ಬೃಹತ್ ಹೋರ್ಡಿಂಗ್ಸ್ ಹಾಕಲಾಗಿದೆ. ಹೋರ್ಡಿಂಗ್‌ನ್ನು ಕಬ್ಬಿಣದ ಬೃಹತ್ ಆಧಾರಸ್ತಂಭದ ಮೇಲೆ ನೆಲದಿಂದ 50 ಅಡಿ ಎತ್ತರದಲ್ಲಿ ಲಕ ಅಳವಡಿಸಲಾಗಿದೆ.

    ಸುಮಾರು 30 ಅಡಿ ಅಗಲವಿರುವ ಲಕದ ಮೇಲೆ ಜಾಹೀರಾತು ಪ್ರದರ್ಶಿಸಿದರೆ, ಚಾಲಕರು ವಾಹನ ಚಲಾಯಿಸುವಾಗ ಅವರ ಗಮನ ಹೋರ್ಡಿಂಗ್ಸ್‌ನತ್ತ ಹೋಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವುದನ್ನು ತಳ್ಳಿಹಾಕಲಾಗದು.

    ಒಂದು ವೇಳೆ ಮೀಡಿಯನ್‌ನಲ್ಲಿರುವ ಹೋರ್ಡಿಂಗ್‌ಗೆ ವಾಹನ ಗುದಿದ್ದರೆ ಅದರ ರಭಸಕ್ಕೆ ಬೃಹತ್ ಲಕ ರಸ್ತೆ ಮೇಲೆ ಬಿದ್ದು ದುರಂತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಹೋರ್ಡಿಂಗ್ಸ್ ತೆರವುಗೊಳಿಸಿ ವಾಹನ ಸಂಚಾರ ಸುರಕ್ಷತೆಗೆ ಒತ್ತು ನೀಡಬೇಕಿದೆ ಎಂಬ ಸಲಹೆ ಸ್ಥಳೀಯರಿಂದ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts