More

    ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ನಂಬಿಸಿ 31 ಕೋಟಿಗೂ ಅಧಿಕ ಹಣ ವಂಚನೆ: ಇಬ್ಬರ ಬಂಧನ

    ಬೆಂಗಳೂರು: ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ 870ಕ್ಕೂ ಅಧಿಕ ಜನರಿಂದ ಬರೋಬ್ಬರಿ 31 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹಿಸಿ ವಂಚಿಸಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ ನಿವಾಸಿ ಅಶೋಕ್ ಮೊಗವೀರ (52), ಯಲಹಂಕದ ಜೆ.ಜೋಜಿಪೌಲ್ (29) ಬಂಧಿತರು.

    ಅಮಾಯಕರಾದಂತಹ ಸಾರ್ವಜನಿಕರನ್ನು ಗುರುತಿಸಿ ಅವರಿಗೆ ಕರೆನ್ಸಿ ಟ್ರೇಡಿಂಗ್ ಬಿಜಿನೆಸ್ ಮಾಡುವುದಾಗಿ ನಂಬಿಸುತ್ತಿದ್ದರು. ನಮ್ಮ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.5 ರಿಂದ ಶೇ.15ರ ವರೆಗೆ ಹೂಡಿಕೆ ಮಾಡಿದ ಹಣಕ್ಕೆ 36 ದಿನಗಳಿಗೆ ಪೇ ಔಟ್ ನೀಡುವುದಾಗಿ ನಂಬಿಸಿದ್ದರು. ನಮ್ಮ ಸಂಸ್ಥೆಗೆ ಹಣ ಹೂಡಿಕೆ ಮಾಡಿಸಿದವರಿಗೂ ಶೇ.2 ರಿಂದ ಶೇ.5ರಷ್ಟು ಕಮಿಷನ್ ನೀಡುತ್ತೇವೆ ಎಂದು ಹೇಳುತ್ತಿದ್ದರು. ಇದೇ ರೀತಿಯ ಆಶ್ವಾಸನೆ ಕೊಟ್ಟು ಇದುವರೆಗೆ ಸುಮಾರು 870ಕ್ಕೂ ಹೆಚ್ಚಿನ ಸಾರ್ವಜನಿಕರಿಂದ 31ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ತವರಲ್ಲಿ ಬಿಜೆಪಿ ಪ್ರಚಾರ ರಥದ ಮೇಲೆ ಕಲ್ಲು ತೂರಾಟ: ಕಾರ್ಯಕರ್ತನ ಮೇಲೆ ಹಲ್ಲೆ

    ಗ್ರಾಹಕರಿಗೆ ಸಬೂಬು ಹೇಳುತ್ತಿದ್ದರು

    ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಂಡ ಹಣದಲ್ಲಿ ಆರೋಪಿಗಳು ಯಾವುದೇ ಟ್ರೇಡಿಂಗ್ ಮಾಡುತ್ತಿರಲಿಲ್ಲ. ಹೆಚ್ಚಿನ ದರದಲ್ಲಿ ಪೇ ಔಟ್ ಮತ್ತು ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿದ ಮಧ್ಯವರ್ತಿಗಳಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದರು. ಉಳಿದ ಹಣದಲ್ಲಿ ಸ್ಯಾಂಜೋಸ್ ವೆಂಚರ್, ಗ್ರಾವಿಟಿ ಸ್ಪೋರ್ಟ್ಸ್​, ಗ್ರಾವಿಟಿ ಕ್ಲಬ್ ರೆಸಾರ್ಟ್ ಪ್ರೈ, ಇಂಡಿಯಾ ಲಿ. ಹೆಸರಿನಲ್ಲಿ ತಮ್ಮ ಸ್ವಂತ ವ್ಯವಹಾರಗಳಿಗೆ ಹಣ ಬಳಸಿಕೊಂಡಿದ್ದರು. ಇನ್ನು ಹಣ ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದ ಗ್ರಾಹಕರಿಗೆ ಸಬೂಬು ಹೇಳಿ ಎಲ್ಲ ಲಾಭಾಂಶ ಸೇರಿಸಿ ಕೆಲ ತಿಂಗಳುಗಳಲ್ಲೇ ಹಿಂತಿರುಗಿಸುವುದಾಗಿ ನಂಬಿಸುತ್ತಿದ್ದರು. ಹೀಗಾಗಿ ಆರೋಪಿಗಳ ವಿರುದ್ಧ ದೂರು ನೀಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು.

    ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ ?

    ಕಮ್ಮನಹಳ್ಳಿಯ ನಿವಾಸಿ ಅನಿತಾ ಎಂಬುವವರು ಸ್ನೇಹಿತೆ ನಾಗಜ್ಯೋತಿ ಮೂಲಕ 2021ರಲ್ಲಿ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್‌ನಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭಾಂಶ ಪಡೆದಿರುವುದಾಗಿ ತಿಳಿಸಿದ್ದರು. ಸ್ನೇಹಿತೆಯ ಮಾತಿಗೆ ಮರುಳಾದ ಅನಿತಾ ಹಣ ಹೂಡಿಕೆ ಮಾಡಲು ಮುಂದಾಗಿ ರಾಜ್‌ಕುಮಾರ್ ರಸ್ತೆಯಲ್ಲಿರುವ ಅಂಬಿಕಾ ಪ್ಲಾಜಾದಲ್ಲಿದ್ದ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್ ಕಚೇರಿಗೆ ತೆರಳಿ ವಿಚಾರಿಸಿದ್ದರು. ಅಲ್ಲಿನ ಸಿಬ್ಬಂದಿ ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ, ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ದರದಲ್ಲಿ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದರು. ಬಳಿಕ ಅನಿತಾ ಅವರಿಂದ ಬರೊಬ್ಬರಿ 27.50 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಸ್ವಲ್ಪ ದಿನಗಳ ನಂತರ ಅವರು ಹೇಳಿದಂತೆ ಲಾಭಾಂಶ ನೀಡದೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದ್ದರು. ಈ ಸಂಬಂಧ ಅನಿತಾ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆಯವರು ಹಲವು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು.

    ಇದನ್ನೂ ಓದಿ: ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿತ್ತು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಅಶೋಕ್ ಮೊಗವೀರ ಜನರಿಗೆ ವಂಚಿಸಿ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಗೋವಾ ರಾಜ್ಯದಲ್ಲಿ ತಲೆಮರೆಸಿಕೊಂಡು ಓಡಾಡಿಕೊಂಡಿರುವುದು ಗೊತ್ತಾಗಿತ್ತು. ಆತನ ಬಗ್ಗೆ ಮಾಹಿತಿ ಕಲೆ ಹಾಕಿ, ಗೋವಾ ರಾಜ್ಯದ ಪೋರ್‌ವೊರಿಮ್ ಪೊಲೀಸ್ ಠಾಣಾ ವ್ಯಾಪ್ತಿಯ, ಪೆಂಚಡೆ ಪ್ರಾಂಕಾದಲ್ಲಿ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮತ್ತೊಬ್ಬ ಆರೋಪಿ ಜೆ.ಜೋಜಿಪೌಲ್ ಸುಳಿವು ಕೊಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts