More

    ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

    ವಿಜಯಪುರ: ಹಿಂದು- ಮುಸ್ಲಿಂರು ಒಂದೇ ತಾಯಿ ಮಕ್ಕಳು, ಸಹೋದರರಂತೆ ಬಾಳಬೇಕು, ಬಿಜೆಪಿ ಎಂದಿಗೂ ಹಿಂದೂ- ಮುಸ್ಲಿಂರೆಂದು ಬೇಧ- ಭಾವ ಎಣಿಸಿಲ್ಲ ಎನ್ನುವ ಮೂಲಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

    ಐತಿಹಾಸಿಕ ತಾಳಿಕೋಟೆಯಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದು- ಮುಸ್ಲಿಂ ರು ಒಟ್ಟಾಗಿ ಬಾಳಬೇಕೆಂಬುದೇ ಬಿಜೆಪಿಯ ಧ್ಯೇಯ. ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಎಂದಿಗೂ ಅನ್ಯಾಯ ಮಾಡಿಲ್ಲ. ನೋವಾಗುವಂಥ ಕೆಲಸ ಮಾಡಿಲ್ಲ ಎಂದರು.

    ಯಾವುದೇ ಸ್ಟಾರ್ ಪ್ರಚಾರಕರು ಬೇಕಿಲ್ಲ

    ಎ.ಎಸ್. ಪಾಟೀಲ ನಡಹಳ್ಳಿಗೆ ಯಾವುದೇ ಸ್ಟಾರ್ ಪ್ರಚಾರಕರು ಬೇಕಿಲ್ಲ. ಅವರೇ ಸ್ಟಾರ್ ಪ್ರಚಾರಕರು. ಅವರನ್ನು ಪಡೆದ ಈ ಕ್ಷೇತ್ರ ಧನ್ಯ. ನಡಹಳ್ಳಿ ಸದನದಲ್ಲಿ ಮಾತನಾಡುತ್ತಿದ್ದರೆ ಇಡೀ ಸದನ ಶಾಂತವಾಗಿ ಅವರ ನುಡಿ ಮುತ್ತುಗಳನ್ನು ಆಲಿಸುತ್ತದೆ. ಹೀಗಾಗಿ ಇನ್ನೊಮ್ಮೆ ಅವರನ್ನು ಸದನಕ್ಕೆ ಕಳುಹಿಸಬೇಕು. ಅದಕ್ಕಾಗಿ ಪ್ರಸಕ್ತ ಚುನಾವಣೆಯಲ್ಲಿ ಸುಮಾರು ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

    ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಅಧಿಕಾರವಧಿಯುದ್ದಕ್ಕೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸರ್ವ ಸಮುದಾಯಗಳನ್ನು ಸಹೋದರರಂತೆ ಕಂಡಿದ್ದೇನೆ. ಯಾವುದೇ ಜಾತಿ, ಧರ್ಮ ಎಂದು ಬೇಧವೆಣಿಸದೆ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದು ಮತ್ತೊಂದು ಅವಧಿಗೆ ಅವಕಾಶ ಕೊಡಬೇಕೆಂದು ವಿನಂತಿಸಿದ್ದಾರೆ.

    As patil with bsy

    ಬೃಹತ್ ರೋಡ್ ಶೋ

    ಪಟ್ಟಣದ ರಾಜವಾಡೆಯಿಂದ ಆರಂಭಗೊಂಡ ರೋಡ್ ಶೋದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಭಾಗಗಳಿಂದ ಬಂದ ಕಾರ್ಯಕರ್ತರು ಸಂಭ್ರಮದಿಂದ ಹೆಜ್ಜೆ ಹಾಕಿದರು.

    ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಯುವಕರು ಬಿಜೆಪಿ ಬಾವುಟ ಹಿಡಿದು ರಾರಾಜಿಸಿದರು. ಮಕ್ಕಳು ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಯೋಗಿ ಆದಿತ್ಯನಾಥ ಮತ್ತಿತರ ನಾಯಕರ ಮುಖವಾಡ ಧರಿಸಿ ಕುಣಿದು ಕುಪ್ಪಳಿಸಿದರು.

    ರಾಜವಾಡೆಯಿಂದ ಬಸವೇಶ್ವರ ವೃತ್ತ, ಕತ್ರಿ ಬಜಾರ್ ಮಾರ್ಗವಾಗಿ ಸಂಗಮೇಶ್ವರ ಕಲ್ಯಾಣ ಮಂಟಪದವರೆಗೆ ರೋಡ್ ಶೋ ನಡೆಯಿತು. ಮಾರ್ಗದುದ್ದಕ್ಕೂ ನಡಹಳ್ಳಿ ಜನರತ್ತ ಕೈ ಬೀಸಿ ವಿಜಯದ ಸಂಕೇತ ತೋರಿದರು. ಅಭಿಮಾನಿಗಳು ಹೂಮಾಲೆ ಹಾಕಿ ಅಭಿಮಾನ ಮೆರೆದರು.

    ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

    ಇದನ್ನೂ ಓದಿ: ಆಯುರ್ವೇದ ವೈದ್ಯರು ಎಂಬಿಬಿಎಸ್‌ ವೇತನಕ್ಕೆ ಅರ್ಹರಲ್ಲ: ಸುಪ್ರೀಂ ಕೋರ್ಟ್​

    ಹೆಲಿಕಾಪ್ಟರ್ ಸಂಚಾರಕ್ಕೆ‌ ಸಂಚಕಾರ

    ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಯಡಿಯೂರಪ್ಪ ಅವರನ್ನು ನೋಡಲು ಜನ ಮುಗಿಬಿದ್ದಿದ್ದರು. ಹೆಲಿಕಾಪ್ಟರ್ ನಲ್ಲಿ ಬಂದ ಯಡಿಯೂರಪ್ಪ ತರಾತುರಿಯಲ್ಲಿ ವಾಪಸ್ ಆದರು.

    ಮುಂದೆ ಕಲಬುರಗಿಗೆ ಹೋಗಬೇಕಿದ್ದು, ಅಲ್ಲಿ ಹವಾಮಾನ ವೈಪರೀತ್ಯ ಕಂಡು ಬಂದಿತು‌. ಹೀಗಾಗಿ ವಾಯು ಮಾರ್ಗವನ್ನು ಮೊಟಕುಗೊಳಿಸಿ ತಾಳಿಕೋಟೆ ಗೆ ವಾಪಸ್ ಆದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕಲಬುರಗಿಗೆ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts