VIDEO| ಶಾರುಖ್​ ಖಾನ್​ ಜೊತೆಗಿನ ಮಾತುಕತೆಯನ್ನು ಬಿಚ್ಚಿಟ್ಟ ರಿಂಕು ಸಿಂಗ್ ​

rinku singh sharukh khan
Published on

ಕಲ್ಕತ್ತಾ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಮೆಂಟ್​ನಲ್ಲಿ ಕೊಲ್ಕತ್ತಾ ನೈಟ್​ರೈಡರ್ಸ್​ ಪರ ಯುವ ಬ್ಯಾಟ್ಸ್​​ಮ್ಯಾನ್​ ರಿಂಕು ಸಿಂಗ್​ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಗುಜರಾತ್​​ ಟೈಟಾನ್ಸ್​ ವಿರುದ್ಧ ಕಡೇ ಓವರ್​ನ ಐದು ಎಸೆತಗಳನ್ನು ಸಿಕ್ಸರ್​​ಗಟ್ಟಿದ ನಂತರ ತೀವ್ರ ಖ್ಯಾತಿಯನ್ನು ಗಳಿಸಿರುವ ರಿಂಕು ಸಿಂಗ್​ಗೆ ಬಾಲಿವುಡ್​ ನಟ, ಕೊಲ್ಕತ್ತಾ ನೈಟ್​ರೈಡರ್ಸ್​​ ತಂಡದ ಮಾಲೀಕ ಶಾರುಖ್​ ಖಾನ್​ ಕರೆ ಮಾಡಿದ್ದರಂತೆ.

ನನ್ನ ಮದುವೆಗೆ ಬರುವುದಾಗಿ ಹೇಳಿದ್ದಾರೆ

ಈ ಕುರಿತು ಮಾತನಾಡಿರುವ ರಿಂಕು ಸಿಂಗ್​ ಅಂದು ಪಂದ್ಯ ಮುಗಿದ ಬಳಿಕ ನನಗೆ ಖುದ್ದು ಶಾರುಖ್​ ಖಾನ್​ ಅವರಿಂದ ಕರೆ ಬಂದಿತ್ತು ಮತ್ತು ಅವರು ನನ್ನ ಆಟವನ್ನು ಶ್ಲಾಘಿಸಿ ಅಭಿನಂದಿಸಿದರು.

ಮಾತನಾಡುತ್ತಾ ನನ್ನ ಮದುವೆಗೆ ಬರುವುದಾಗಿಯೂ ಶಾರುಖ್​ ಖಾನ್​ ಅವರು ಹೇಳಿದ್ದಾರೆ ಎಂದು ರಿಂಕು ಸಿಂಗ್​ ಸಂತಸ ವ್ಯಕ್ತಪಡಿಸಿದ್ದಾರೆ.

ಕುಣಿಯುವುದಾಗಿ ಹೇಳಿದ SRK

ನನ್ನ ಮುದುವೆಯ ಬಗ್ಗೆ ಮಾತನಾಡುತ್ತಾ ಶಾರುಖ್​ ಖಾನ್​ ಅವರು ಎಲ್ಲರೂ ನನ್ನನ್ನು ಅವರ ಮದುವೆಗೆ ಆಮಂತ್ರಿಸುತ್ತಾರೆ. ಆದರೆ, ನಾನು ಹೋಗುವುದಿಲ್ಲ ನಿನ್ನ ಮದುವೆಗೆ ಬಂದು ಕುಣಿಯುತ್ತೇನೆ ಎಂದು ದುರವಾಣಿ ಕರೆಯಲ್ಲಿ ನನ್ನ ಜೊತೆ ಮಾತನಾಡುವ ವೇಳೆ ಹೇಳಿದ್ದರು ಎಂದು ರಿಂಕು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net