ಗುಜರಾತ್​ ಸಿಎಂಒ ಸಿಬ್ಬಂದಿ ಸೋಗಿನಲ್ಲಿ ಮಹಿಳೆಯರಿಗೆ ವಂಚನೆ; ಆರೋಪಿ ಬಂಧನ

Arrested man in handcuffs
Arrested man in handcuffs
Published on

ವಡೋದರಾ: ಗುಜರಾತ್​ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯಂತೆ ಫೋಸ್​ ನೀಡಿ ಮಹಿಳೆಯರನ್ನು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಡೋದರಾ ಪೊಲಿಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

CMO ಕಚೇರಿ ಸಿಬ್ಬಂದಿಯಂತೆ ಫೋಸ್​

ಬಂಧಿತ ಆರೋಪಿ ವಿರಾಜ್​ ಅಶ್ವಿನ್​ ಪಟೇಲ್​ ತಾನು ಸರ್ಕಾರಿ ಉದ್ಯೋಗಿಯಾಗಿದ್ದು ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಮಹಿಳೆಯರಿಗೆ ಗಾಳ ಹಾಕುತ್ತಿದ್ದ.

arrested accused

ಸರ್ಕಾರಿ ಕಾರ್ಯಕ್ರಮಗಳಿಗೆ ತಮ್ಮನ್ನು ರಾಯಭಾರಿಯನ್ನಾಗಿ ಮಾಡುವುದಾಗಿ ಹೇಳಿ ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡು ನಂತರ ಅವರ ಕೈಗೆ ಸಿಗದೆ ವಂಚಿಸುತ್ತಿದ್ದ.

ಹಲವು ಭಾರಿ ಅತ್ಯಾಚಾರ

ಆರೋಪಿ ವಿರಾಜ್ ಇದೇ ರೀತಿ ಮುಂಬೈ ಮೂಲದ ಮಹಿಳೆಯನ್ನು ಪರಿಚಯ ಮಾಡಿಕೊಂಡು ತಾನು ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದು ಗುಜರಾತ್ ಇಂಟರ್​ನ್ಯಾಷನಲ್​​ ಫೈನಾನ್ಸ್​ ಟೆಕ್​ ಸಿಟಿ(GIFT)ಯ ಅಧ್ಯಕ್ಷ ಎಂದು ಮಹಿಳೆ ಬಳಿ ಹೇಳಿಕೊಂಡಿದ್ದಾನೆ.

ನಿನ್ನನ್ನು ಗಿಫ್ಟ್​ ಸಿಟಿಯ ರಾಯಭಾರಿಯನ್ನಾಗಿ ಮಾಡುವುದಾಗಿ ಹೇಳಿ ನಂಬಿಸಿದ ಆರೋಪಿಯು ಬಳಿಕ ಮಹಿಳೆಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಹಲವು ಭಾರಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ವಂಚನೆ, ಅತ್ಯಾಚಾರ ಆರೋಪದಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net