

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 46ನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಸಿಎಸ್ಕೆ 50 ರನ್ಗಳ ಅಂತರದಿಂದ ಎಸ್ಆರ್ಎಚ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ತನ್ನ ತವರಿನಲ್ಲಿ ಸೋಲು ಕಾಣದೆ ಅಭಿಮಾನಿಗಳಲ್ಲಿ ಸಂತಸ, ಭರವಸೆ ಹೆಚ್ಚಿಸಿತು.
ಇದನ್ನೂ ಓದಿ: ಕಾಡಾನೆ ದಾಳಿಗೆ ವಿದ್ಯುತ್ ಕಂಬ ಧರಾಶಾಹಿ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಎಸ್ಆರ್ಎಚ್ ಸಿಎಸ್ಕೆಗೆ ಬ್ಯಾಟ್ ಮಾಡಲು ಆಹ್ವಾನಿಸಿತು. ಇದರ ಬೆನ್ನಲ್ಲೇ ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ ಬ್ಯಾಟ್ಸ್ಮನ್ಗಳು ಸನ್ರೈಸರ್ಸ್ ಬೌಲರ್ಗಳ ಎದುರು ಆರ್ಭಟಿಸುವ ಮೂಲಕ 211 ರನ್ಗಳನ್ನು ಸಿಡಿಸಿ, ಎದುರಾಳಿಗಳಲ್ಲಿ ಬೆವರಿಳಿಸಿದರು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್ರೈಸರ್ಸ್ಗೆ ಆರಂಭಿಕ ಹಂತದಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಸಂಕಷ್ಟ ತಂದೊಡ್ಡಿತು.
ಅವರ ಬೆನ್ನಲ್ಲೇ ಅಭಿಷೇಕ್ ಶರ್ಮಾ, ಅನ್ಮೋಲ್ ಪ್ರೀತ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಮಾರ್ಕ್ರಮ್ ಹೀಗೆ ಒಬ್ಬರ ನಂತರ ಮತ್ತೊಬ್ಬರು ಸಿಎಸ್ಕೆ ವೇಗಿಗಳಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಹಾದಿ ಹಿಡಿದರು. ಇದು ಸನ್ರೈಸರ್ಸ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಸತತ ಗೆಲುವುಗಳಿಂದ ರನ್ರೈಸರ್ಸ್ ಎಂಬ ಬಿರುದು ಪಡೆದಿದ್ದ ಹೈದರಾಬಾದ್ ತಂಡಕ್ಕೆ ಇದೀಗ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕಂಡ ಹೀನಾಯ ಸೋಲು ಭಾರೀ ಮುಖಭಂಗ ಉಂಟುಮಾಡಿತು.