ಕ್ರಿಕೆಟಿಗರು ನನಗೆ ಬೆತ್ತಲೆ ಫೋಟೋ ಕಳುಹಿಸಿದ್ದಾರೆ: ಹೆಣ್ಣಾಗಿ ಬದಲಾದ ಅನಯಾ ಬಂಗಾರ್ ಸ್ಫೋಟಕ ಆರೋಪ​! Anaya Bangar

Anaya Bangar
Published on

Anaya Bangar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ಅನಯಾ ಬಂಗಾರ್​, ಈ ಮೊದಲು ಗಂಡಾಗಿದ್ದರು. ಆರ್ಯನ್ ಬಂಗಾರ್ ಆಗಿದ್ದ ಅವರು ಆಪರೇಷನ್​ ಮಾಡಿಸಿಕೊಳ್ಳುವ ಮೂಲಕ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಇದು ಕೂಡ ಭಾರಿ ಸುದ್ದಿಯಾಗಿತ್ತು.

ಆರ್ಯನ್​ ಬಂಗಾರ್​ ಆಗಿದ್ದ ಸಮಯದಲ್ಲಿ ಕ್ರಿಕೆಟಿಗರೊಂದಿಗೆ ಅವರು ಉತ್ತಮವಾದ ಸಂಬಂಧವನ್ನು ಹೊಂದಿದ್ದರಂತೆ. ಆದರೆ, ಅನಯಾ ಆಗಿ ಬದಲಾದ ನಂತರ, ಅವರು ಅನುಭವಿಸಿದ ಕೆಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಹಿರಿಯ ಆಟಗಾರನೊಬ್ಬ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ಅಲ್ಲದೆ, ತನ್ನೊಂದಿಗೆ ಮಲಗುವಂತೆ ಬಲವಂತ ಮಾಡಿದ ಎಂದು ಅನಯಾ ಬಂಗಾರ್​ ಆರೋಪ ಮಾಡಿದ್ದಾರೆ.

ಹುಡುಗಿಯಾಗಿ ಬದಲಾದ ಆರ್ಯನ್, ಟೀಮ್​ ಇಂಡಿಯಾದ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ. ಕುಟುಂಬದಲ್ಲಿ ಆತನೇ ಹಿರಿಯ. ತನ್ನ ತಂದೆಯ ಹೆಜ್ಜೆಗಳನ್ನೇ ಅನುಸರಿಸಿದ ಆರ್ಯನ್​, ಕ್ರಿಕೆಟಿಗನಾಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ದೇಶೀಯ ಪಂದ್ಯಾವಳಿಗಳಲ್ಲಿ ಆಡಿದರು. ಆದರೆ, ಅವನ ದೇಹದ ಪ್ರಕಾರ, ಆತ ಹುಡುಗನಾಗಿರಲಿಲ್ಲ, ತಾನೊಬ್ಬ ಹುಡುಗಿ ಎಂಬುದನ್ನು ಅರಿತುಕೊಂಡ ಬಳಿಕ ಹಾರ್ಮೋನ್ ಬದಲಿ ಚಿಕಿತ್ಸೆಗೆ ಒಳಗಾದನು. ಇದೀಗ ಹುಡುಗಿಯಾಗಿ ಬದಲಾಗಿರುವ ಆರ್ಯನ್, ಅನಯಾ ಬಂಗಾರ್ ಎಂಬ ಹೊಸ ಹೆಸರಿನೊಂದಿಗೆ ಜನರ ಮುಂದೆ ಬಂದಿದ್ದಾರೆ.

ಅನಯಾ ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿದ್ದಾರೆ. 'ಲಾಲಾಂಟಾಪ್' ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಕ್ರಿಕೆಟ್ ಜಗತ್ತಿನಲ್ಲಿ ಅನೇಕ ವಿಷಕಾರಿ ಪುರುಷರಿದ್ದಾರೆ ಎಂಬ ಸ್ಫೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಆಗ ನನಗೆ ಎಂಟು ಅಥವಾ ಒಂಬತ್ತು ವರ್ಷ ವಯಸ್ಸಾಗಿತ್ತು. ನನ್ನ ತಾಯಿ ಕಪಾಟಿನಿಂದ ಬಟ್ಟೆಗಳನ್ನು ತೆಗೆದು ನನಗೆ ಧರಿಸುತ್ತಿದ್ದರು. ನಾನು ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡು ಕೋಪಗೊಳ್ಳುತ್ತಿದ್ದೆ. ಆಗಲೇ ನನಗೆ ಹುಡುಗಿಯಾಗಬೇಕೆಂಬ ಆಸೆ ಬಂತು. ನಾನು ಹುಡುಗಿಯಂತೆ ಇರಬೇಕು ಎಂದು ಹೇಳಿರು.

ದೇಶೀಯ ಕ್ರಿಕೆಟ್‌ನಲ್ಲಿ, ನಾನು ಮುಶೀರ್ ಖಾನ್, ಸರ್ಫರಾಜ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಆಡಿದ್ದೇನೆ. ಆಗ, ನನ್ನ ದೇಹದ ಆಕಾರವನ್ನು ಬಹಿರಂಗಪಡಿಸದಂತೆ ನಾನು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಏಕೆಂದರೆ, ನನ್ನ ತಂದೆ ಒಬ್ಬ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ತರಬೇತುದಾರರಾಗಿ ಉತ್ತಮ ಖ್ಯಾತಿಯನ್ನು ಹೊಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಅಸಲಿ ಕಥೆಯನ್ನು ಮರೆಮಾಚಬೇಕಾಯಿತು. ಇಡೀ ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ಪುರುಷ ಪ್ರಾಬಲ್ಯದಿಂದ ತುಂಬಿದೆ ಎಂದು ಅನಯಾ ಅಸಮಾಧಾನ ಹೊರಹಾಕಿದರು.

ನನ್ನ ಬಗ್ಗೆ ಸರಿಯಾಗಿ ತಿಳಿದುಕೊಂಡಾಗ, ಕೆಲವರು ಒಳ್ಳೆಯ ಮಾತುಗಳನ್ನಾಡಿದರು ಮತ್ತು ನನ್ನ ಬೆಂಬಲಕ್ಕೆ ನಿಂತರು. ಇನ್ನು ಕೆಲವರು ನನಗೆ ಕಿರುಕುಳ ನೀಡಿದರು. ಕೆಲವೊಮ್ಮೆ, ಅವರು ತಮ್ಮ ನಗ್ನ ಫೋಟೋಗಳನ್ನು ನನಗೆ ಕಳುಹಿಸುತ್ತಿದ್ದರು. ಒಬ್ಬ ವ್ಯಕ್ತಿಯಂತೂ ಎಲ್ಲರ ಮುಂದೆ ನನ್ನನ್ನು ಅವಮಾನಿಸುತ್ತಿದ್ದ ಅಲ್ಲದೆ, ಒಮ್ಮೆ ನನ್ನ ಬಳಿಗೆ ಬಂದು ತನ್ನ ವೈಯಕ್ತಿಕ ಫೋಟೋಗಳನ್ನು ಕಳುಹಿಸಲು ಕೇಳುತ್ತಿದ್ದ. ಇನ್ನೊಂದು ಸಂದರ್ಭದಲ್ಲಿ, ಒಬ್ಬ ಹಿರಿಯ ಕ್ರಿಕೆಟಿಗನ ಬಳಿ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿದಾಗ, ಕಾರಿನಲ್ಲಿ ಕುಳಿತುಕೊಳ್ಳಿ, ನಾನು ನಿಮ್ಮೊಂದಿಗೆ ಮಲಗಲು ಬಯಸುತ್ತೇನೆ ಎಂದಿದ್ದ ಎಂದು ಅನಯಾ ಬಂಗಾರ್ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net