ಹೇರ್‌ಕಟ್ ಮಾಡಿಸಿಕೊಳ್ಳದಂತೆ ಕ್ರಿಕೆಟಿಗರಿಗೆ ದಿಢೀರ್ ನಿರ್ಬಂಧ ಹೇರಿದ ಆಸ್ಟ್ರೇಲಿಯಾ!

bbl aus hair web
Published on

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಈಗ ಐಪಿಎಲ್ ಮಾದರಿಯ ಬಿಗ್ ಬಾಷ್ ಲೀಗ್ (ಬಿಬಿಎಲ್) ಟಿ20 ಟೂರ್ನಿ ನಡೆಯುತ್ತಿದ್ದು, ಇದರಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ತಲೆ ಕೂದಲು ಕತ್ತರಿಸಿಕೊಳ್ಳದಂತೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ದಿಢೀರ್ ನಿರ್ಬಂಧ ಹೇರಿದೆ! ಕರೊನಾ ವೈರಸ್ ಹರಡುವಿಕೆಯ ಭೀತಿ ಇದಕ್ಕೆ ಕಾರಣವಾಗಿದೆ!

ಆಸ್ಟ್ರೇಲಿಯಾದ ಸಿಡ್ನಿ ಒಳಗೊಂಡ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಈಗ ಕರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಸಿಎ, ಕೋವಿಡ್-19 ಮಾರ್ಗಸೂಚಿಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಇದರನ್ವಯ ಆಟಗಾರರಿಗೆ ಇನ್ನು ಮುಂದೆ ಟೂರ್ನಿ ಮುಗಿಯುವವರೆಗೆ ತಲೆ ಕೂದಲು ಕತ್ತರಿಸಿಕೊಳ್ಳದಂತೆ ಸೂಚಿಸಿದೆ.

ಆಸ್ಟ್ರೇಲಿಯಾ ಸರ್ಕಾರದ ಹೊಸ ಮಾರ್ಗಸೂಚಿಯ ಅನ್ವಯ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಈ ಹಿಂದಿನ ಮಾರ್ಗಸೂಚಿಯ ಅನ್ವಯ ಪೇಸ್ ಮಾಸ್ಕ್ ಧರಿಸಿದ ಕ್ಷೌರಿಕರಿಂದ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿತ್ತು. ಬಿಗ್ ಬಾಷ್ ಲೀಗ್ ಫೆಬ್ರವರಿ 6ರವರೆಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net