ಟೀಂ ಇಂಡಿಯಾಗೆ ಗಂಭೀರ್​ ಹೆಡ್ ಕೋಚ್ ಆದ್ರೆ 'ಸ್ವಲ್ಪ ಎಚ್ಚರದಿಂದ ಇರಬೇಕಾಗುತ್ತದೆ'! ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್

WhatsApp Image 2024-05-21 at 2.05.32 PM
Published on

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ, ಪ್ರಸ್ತುತ ಐಪಿಎಲ್​ನ ಕೊಲ್ಕತ್ತಾ ನೈಟ್​ ರೈಡರ್ಸ್​ ಮೆಂಟರ್ ಆಗಿರುವ ಗೌತಮ್ ಗಂಭೀರ್​​ ಇದೀಗ ಕ್ರಿಕೆಟ್ ಲೋಕದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಾರಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಗೌತಿ ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದು, ಈ ಬಾರಿ ಟೀಂ ಇಂಡಿಯಾದ ಹೆಡ್ ಕೋಚ್ ಆಗ್ತಾರಾ? ಇಲ್ವಾ? ಎಂಬ ವಿಷಯದಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಟೀಂ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ಗೌತಮ್ ಗಂಭೀರ್ ಮೊರೆ ಹೋದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಅನುಮಾನಗಳು ಹುಟ್ಟುಕೊಂಡಿತು. ಸದ್ದಿಲ್ಲದೆ, ಐಪಿಎಲ್ ಮುಕ್ತಾಯವಾದ ಬಳಿಕ ಗೌತಮ್​ರನ್ನು ಬಿಸಿಸಿಐ ಭಾರತದ ಕೋಚ್ ಆಗಿ ನೇಮಕ ಮಾಡಿಕೊಳ್ಳಲಿದೆಯಾ ಅಥವಾ ಅವರೊಟ್ಟಿಗೆ ಒಳಗೊಳಗೆ ಮಾತುಕತೆ ನಡೆಸುತ್ತಿದೆಯೇ? ಎಂಬುದು ಸದ್ಯ ಅನೇಕರ ಪ್ರಶ್ನೆಯಾಗಿದೆ.

ಇನ್ನು ಗೌತಮ್ ಗಂಭೀರ್ ಕೋಚ್ ಆದರೆ ಹೇಗೆ? ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ, "ಕೋಚ್ ಸ್ಥಾನಕ್ಕೆ ಗಂಭೀರ್​ ಆಯ್ಕೆಯೇನು ಕೆಟ್ಟದಾಗಿಲ್ಲ. ಈ ಕುರಿತು ಅನುಮಾನ ಸಹ ಬೇಡ. ಯಾಕಂದ್ರೆ, ನಮಗೆಲ್ಲಾ ತಿಳಿದಿರುವಂತೆ ಗೌತಮ್ ನೇರನುಡಿ ಇರುವ ವ್ಯಕ್ತಿತ್ವ. ಅವರಿಗೆ ಗೊತ್ತಿದೆ, ಒಂದು ತಂಡವನ್ನು ಹೇಗೆ ನಿಭಾಯಿಸಬೇಕು ಮತ್ತು ಕಟ್ಟಬೇಕು ಅಂತ" ಎಂದು ಹೇಳಿದರು.

"ಈ ವಿಷಯದಲ್ಲಿ ಆಕ್ಷನ್ ಇದ್ದಿದ್ದರೆ ಖಂಡಿತ ನಾನು ಅವರಿಗೆ ಬೆಂಬಲ ಕೊಡ್ತೀನಿ. ಆದ್ರೆ, ಹೆಡ್ ಕೋಚ್ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಆ ರೀತಿಯ ಆಕ್ಷನ್ ಪ್ರಕ್ರಿಯೆ ಇಲ್ಲ. ಗೌತಮ್ ಕೋಚ್ ಆದರೆ, ಖಂಡಿತ ತಂಡದ ಆಟಗಾರರಿಗೆ ಕೊಂಚ ಕಷ್ಟವಾಗುತ್ತದೆ. ಯಾಕಂದ್ರೆ, ಅಲ್ಲಿ ಹಿರಿಯ ಆಟಗಾರರು ಸಹ ಇದ್ದಾರೆ. ಅದರಲ್ಲೂ ಗಂಭೀರ್ ತುಂಬ ನೇರ-ಖಾರ. ಇದು ಕೆಲವರಿಗೆ ಕಷ್ಟ ಎನಿಸಬಹುದು. ಅವರು ಕೆಲಸ ಮಾಡುವ ಶೈಲಿ ನೋಡಿದ್ರೆ, ಒಬ್ಬ ಕಟ್ಟುನಿಟ್ಟಿನ ತಂದೆಯಂತೆ ಕಾಣ್ತಾರೆ. ಯಾವಾಗ ತಂದೆ ತುಂಬ ಸ್ಟ್ರಿಕ್ಟ್​ ಇರುತ್ತಾರೋ, ಆಗ ಮಕ್ಕಳು ​ಸ್ವಲ್ಪ ಎಚ್ಚರದಿಂದ ಇರಬೇಕಾಗುತ್ತದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net