ಟಿ-20 ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಹೆಚ್ಚಾದ ಕುತೂಹಲ; ಭಾರತ-ಪಾಕಿಸ್ತಾನ ಎದುರಾಗಲಿ ಎಂದ ಕ್ರಿಕೆಟ್ ಫ್ಯಾನ್ಸ್​!

India vs Pak
Published on

ನವದೆಹಲಿ: ಎಲ್ಲರ ಕುತೂಹಲ ಟಿ-20 ವಿಶ್ವಕಪ್​ ಫೈನಲ್ ಪಂದ್ಯದತ್ತ ಸಾಗಿದೆ. ಸೆಮಿಫೈನಲ್​ನ ಮೊದಲ ಪಂದ್ಯ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತ - ಇಂಗ್ಲೆಂಡ್​ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇದೀಗ ಕ್ರಿಕೆಟ್ ಪ್ರೇಮಿಗಳು ಮೊದಲ ಪಂದ್ಯದಲ್ಲಿ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತ ಗೆಲ್ಲಲಿ. ಆ ಮೂಲಕ ಫೈನಲ್​ನಲ್ಲಿ ಈ ಎರಡು ಸಾಂಪ್ರದಾಯಿಕ ತಂಡಗಳು ಮುಖಾಮುಖಿಯಾಗಿ, ಭಾರತ ಗೆಲ್ಲಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಪ್ರತಿಬಾರಿಯೂ ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾದಾಗ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗುತ್ತದೆ. ಜತೆಗೆ ಪ್ರತಿಷ್ಟೆಯ ಪಂದ್ಯವಾಗಿ ಬದಲಾಗುತ್ತದೆ. ಹೀಗಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವನ್ನು ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ವೀಕ್ಷಿಸುತ್ತದೆ.

ಗ್ರೂಪ್​ ಹಂತದ ಪಂದ್ಯದಲ್ಲಿ ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭಾರತ 160 ರನ್ ಬೆನ್ನು ಹತ್ತಿ, ಆರು ವಿಕೆಟ್​​ ಜಯ ದಾಖಲಿಸಿತ್ತು. ಕುತೂಹಲಕರವಾಗಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೋರಿದ ಜವಾಬ್ದಾರಿಯುತ ಇನ್ನಿಂಗ್ಸ್​ನಿಂದಾಗಿ ಭಾರತಕ್ಕೆ ಗೆಲುವು ದಾಖಲಿಸಿಕೊಳ್ಳುಲು ಸಾಧ್ಯವಾಗಿತ್ತು. ಪಾಕಿಸ್ತಾನ ವಿರುದ್ಧದ ಇನ್ನಿಂಗ್ಸ್​​ನಲ್ಲಿ ಕೊಹ್ಲಿ 82 ರನ್​ ಸಿಡಿಸಿ ತಂಡದ ಗೆಲುವಿನ ದಡ ಸೇರಿಸಿದ್ದರು. ಇದೀಗ ಮತ್ತೊಮ್ಮೆ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಈ ಬಗ್ಗೆ ನಡೆದ ಸಮೀಕ್ಷೆಯೊಂದರಲ್ಲಿ ಬಹುತೇಕರು ಈ ಬಾರಿಯ ಟಿ-20 ವಿಶ್ವಕಪ್​ ಭಾರತ ಜಯಿಸಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net