

ಕಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ದಳಪತಿ ವಿಜಯ್ ಅವರ ಮಾಸ್ಟರ್ ಚಿತ್ರ ಲಾಕ್ಡೌನ್ನಲ್ಲಿಯೂ ಅತಿ ಹೆಚ್ಚು ಸದ್ದು ಮಾಡಿದೆ. ಸಿನಿಮಾ ಪ್ರದರ್ಶನ ಸ್ಥಗಿತವಾದರೂ, ಬಿಡುಗಡೆ ಯಾವಾಗ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇದೀಗ ಇದೇ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಓಟಿಟಿಯಲ್ಲಿ ರಿಲೀಸ್ ಆಗಲು ಈ ಚಿತ್ರ ಎಷ್ಟು ಮೊತ್ತಕ್ಕೆ ಬಿಕರಿಯಾಗಿದೆ ಎಂಬ ವಿಚಾರ ಅಭಿಮಾನಿಗಳ ನಿದ್ದೆಗೆಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆಗೆ ಕೊಕ್ಕೆ ಬಿತ್ತು. ಅದರಂತೆ ದೀಪಾವಳಿ ಪ್ರಯುಕ್ತ ನವೆಂಬರ್ 12ಕ್ಕೆ ಸಿನಿಮಾ ಬಿಡುಗಡೆ ಮಾಡಿಕೊಳ್ಳಲು ತಂಡ ಪ್ಲ್ಯಾನ್ ಮಾಡಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಓಟಿಟಿ ಕುರಿತ ಸುದ್ದಿ ಸದ್ದು ಮಾಡುತ್ತಿದೆ.
ಈ ಮೊದಲು ಬರೋಬ್ಬರಿ 80 ಕೋಟಿ ರೂ ಮೊತ್ತಕ್ಕೆ ಮಾಸ್ಟರ್ ಸಿನಿಮಾವನ್ನು ಖರೀದಿ ಮಾಡಲು ದೊಡ್ಡ ಓಟಿಟಿ ಸಂಸ್ಥೆಯೊಂದು ಮುಂದೆ ಬಂದಿತ್ತು. ಇದೀಗ ಮಾಸ್ಟರ್ ಚಿತ್ರದ ನಿರ್ಮಾಪಕರು ಬರೋಬ್ಬರಿ 100 ಕೋಟಿಗೆ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸಿನಿಮಾ 100 ಕೋಟಿಗೆ ಓಟಿಟಿಯಲ್ಲಿ ಬಿಡುಗಡೆ ಆಗಿದ್ದೇ ಆದರೆ, ದಕ್ಷಿಣ ಭಾರತ ಸಿನಿಮಾ ರಂಗದಲ್ಲಿಯೇ ಅತಿ ಹೆಚ್ಚು ಮೊತ್ತಕ್ಕೆ ಓಟಿಟಿಗೆ ಸೇಲ್ ಆದ ಸಿನಿಮಾ ಆಗಲಿದೆ.
ಇದನ್ನೂ ಓದಿ: ನಟಿ ಜೆನಿಲಿಯಾಗೆ ಕರೊನಾ ಬಂದೇ ಮೂರು ವಾರಗಳಾದವಂತೆ!
ಸದ್ಯ ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸಿದ್ಧವಾಗಿರುವ ಗ್ಯಾಂಗ್ಸ್ಟರ್ ಡ್ರಾಮಾ ಶೈಲಿಯ ಸಿನಿಮಾದಲ್ಲಿ ವಿಜಯ್ ಸೇತುಪತಿ ಖಳನಟನಾಗಿ ನಟಿಸಿದ್ದಾರೆ. ಕ್ಸೇವಿಯರ್ ಬಿಟ್ಟೋ ನಿರ್ಮಾಣ ಮಾಡಿದ್ದು, ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಮಾಳವಿಕಾ ಮೋಹನನ್ ನಾಯಕಿಯಾಗಿದ್ದಾರೆ. (ಏಜೆನ್ಸೀಸ್)