ನಟಿ ಜೆನಿಲಿಯಾಗೆ ಕರೊನಾ ಬಂದೇ ಮೂರು ವಾರಗಳಾದವಂತೆ!

image
Published on

ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ಜೆನಿಲಿಯಾ ಡಿಸೋಜಾ, ಕರೊನಾ ಕುರಿತಾದ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಅದೇನೆಂದರೆ, ಜೆನಿಲಿಯಾಗೆ ಕರೊನಾ ಸೋಂಕು ತಗುಲಿ ಮೂರು ವಾರಗಳೇ ಕಳೆದಿವೆಯಂತೆ!

ಈ ವಿಚಾರವನ್ನು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಅವರು, ಸದ್ಯದ ಸ್ಥಿತಿ ಹೇಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ‘ಕರೊನಾ ಸೋಂಕು ಧೃಡಪಟ್ಟು 21 ದಿನಗಳಾಗಿವೆ. ಇವತ್ತು ವರದಿ ನೆಗೆಟಿವ್​ ಬಂದಿದೆ’ ಎಂದಿದ್ದಾರೆ.

ಕಳೆದ ಮೂರು ವಾರಗಳಿಂದ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್​ ವಿಧಿಸಿಕೊಂಡು, ಮನೆಮಂದಿಯಿಂದ ದೂರವೇ ಉಳಿದಿದ್ದ ಜೆನಿಲಿಯಾ, ಆ 21 ದಿನಗಳನ್ನು ಕಳೆಯುವುದು ಅವರಿಗೆ ದೊಡ್ಡ ಚಾಲೆಂಜಿಂಗ್​ ಆಗಿತ್ತು ಎಂದು ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

ಇನ್ನು ಈ ಮೊದಲು ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಪುತ್ರ ಅಭಿಷೇಕ್ ಬಚ್ಚನ್​, ಐಶ್ವರ್ಯಾ ರೈ ಮತ್ತು ಆರಾಧ್ಯಾಗೂ ಕರೊನಾ ಇರುವುದು ಖಚಿತವಾಗಿತ್ತು. ಇದೀಗ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಕರೊನಾದಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಗಾಯಕ ಎಸ್​ಪಿಬಿ ಅವರ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net