ದುನಿಯಾ ವಿಜಯ್​ಗೆ ಪುನೀತ್​, ಕಿಚ್ಚನಿಗೆ ಶಿವಣ್ಣ​...

collage (24)
Published on

ದುನಿಯಾ ವಿಜಯ್​ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಸಲಗ ಸಿನಿಮಾ ಇತ್ತೀಚೆಗಷ್ಟೇ ಹಾಡಿನ ವಿಚಾರವಾಗಿ ಸದ್ದು ಮಾಡಿತ್ತು. ಮಳೆಯೇ ಮಳೆಯೇ ಹಾಡಿನ ಶೂಟಿಂಗ್​ನಲ್ಲಿ ಪಾಲ್ಗೊಂಡಿತ್ತು. ಇದೀಗ ಇದೇ ಹಾಡಿನ ಬಿಡುಗಡೆಗೆ ಚಿತ್ರತಂಡ ಪ್ಲಾನ್​ ಮಾಡಿದೆ.

ಹೌದು, ಕೆ.ಪಿ. ಶ್ರೀಕಾಂತ್​ ನಿರ್ಮಾಣ ಮಾಡಿರುವ ಸಲಗ ಸಿನಿಮಾದ ಮಳೆಯೇ ಮಳೆಯೇ ಹಾಡು ಸೆಪ್ಟೆಂಬರ್​ 5ರ ಬೆಳಗ್ಗೆ 11ಗಂಟೆಗೆ ಎ2 ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಬಿಡುಗಡೆ ಮಾಡಲಿದ್ದಾರೆ.

ಇತ್ತ ಕಿಚ್ಚ ಸುದೀಪ್​ ಜನ್ಮದಿನಕ್ಕೆ ದಿನಗಣನೆ ಶುರುವಾಗಿದ್ದು, ಅಭಿಮಾನಿಗಳು ಕಾತರದಲ್ಲಿದ್ದಾರೆ. ಯಾವೆಲ್ಲ ಸಿನಿಮಾಗಳಿಂದ ಏನೆಲ್ಲ ವಿಶೇಷತೆಗಳು ಹೊರಬರಲಿವೆ ಎಂದು ಕಾಯುತ್ತಿದ್ದಾರೆ. ಹೀಗಿರುವಾಗಲೇ ಅಭಿಮಾನಿಗಳು ಸಿದ್ಧಪಡಿಸಿದ ಸಿಡಿಪಿಯನ್ನು ಸ್ಯಾಂಡಲ್​ವುಡ್​ನ ಖ್ಯಾತ ನಟರು ಬಿಡುಗಡೆ ಮಾಡಲಿದ್ದಾರೆ.

ಆ ಪೈಕಿ ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್, ಸೆಪ್ಟೆಂಬರ್ 2ರಂದು ಸುದೀಪ್​ ಜನ್ಮದಿನಕ್ಕೆ ಸಿಡಿಪಿ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾದಲ್ಲಿ ಕೆಲ ಪೋಸ್ಟರ್​ಗಳು ಹರಿದಾಡುತ್ತಿದ್ದು, ಶುಭಕೋರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net