

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ ಡಿಯರ್ ಕಾಮ್ರೆಡ್ ಸಿನಿಮಾ ದಕ್ಷಿಣದ ಹಲವು ಭಾಷೆಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಜತೆಗೆ ಬಾಲಿವುಡ್ನಲ್ಲಿ ರಿಮೇಕ್ ಆಗಲಿದೆ ಎಂಬ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡಿತ್ತು.
ಆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮೊದಲು ಧಡಕ್ ಸಿನಿಮಾ ಖ್ಯಾತಿಯ ಜೋಡಿ, ಇಶಾನ್ ಕಟ್ಟರ್ ಮತ್ತು ಜಾನ್ವಿ ಕಪೂರ್ , ಡಿಯರ್ ಕಾಮ್ರೆಡ್ ಸಿನಿಮಾ ರಿಮೇಕ್ನಲ್ಲಿ ನಟಿಸಲಿದೆ ಎನ್ನಲಾಗಿತ್ತು. ಇದೀಗ ಆ ಜೋಡಿಯ ಬದಲಾಗಿದೆ, ಮುಖ್ಯಭೂಮಿಕೆಯಲ್ಲಿ ಕಾರ್ತಿಕ್ ಆರ್ಯನ್, ವಿಜಯ್ ಪಾತ್ರ ನಿಭಾಯಿಸಲಿದ್ದಾರಂತೆ.
ಇದನ್ನೂ ಓದಿ: ನಟಿ ಜೆನಿಲಿಯಾಗೆ ಕರೊನಾ ಬಂದೇ ಮೂರು ವಾರಗಳಾದವಂತೆ!
ಸಿನಿಮಾ ಬಿಡುಗಡೆಯಾದ ಬಳಿಕವೇ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದ ಕರಣ್ ಜೋಹರ್, ಧರ್ಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ. ದಕ್ಷಿಣದಲ್ಲಿ ಈ ಸಿನಿಮಾ ಅಷ್ಟೊಂದು ಮೋಡಿ ಮಾಡಿರಲಿಲ್ಲ. ಇದೀಗ ಕರಣ್ ಜೋಹರ್ ಅದೇನೆಲ್ಲ ಬದಲಾವಣೆ ಮಾಡಿಕೊಂಡು ಸಿನಿಮಾ ಶುರು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)