

ಬೇರೆ ಬೇರೆ ರಾಜ್ಯಗಳಿಂದ ಮುಂಬೈನಲ್ಲಿ ಕೆಲಸಕ್ಕೆಂದು ಬಂದಿರುವ ಸಾವಿರಾರು ಜನರನ್ನು ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಬಾಲಿವುಡ್ ನಟ ಸೂನು ಸೂದ್. ಜತೆಗೆ ಟ್ವಿಟರ್ನಲ್ಲಿಯೂ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುವ ಸೋನು, ರಿಯಲ್ ಲೈಫ್ನಲ್ಲಿ ಹೀರೋ ಆಗಿದ್ದಾರೆ. ಅದಕ್ಕವರ ಟ್ವಿಟ್ ಸಂದೇಶಗಳು, ಬೇರೆ ಬೇರೆ ಟ್ವಿಟರ್ಗಳಿಗೆ ಪ್ರತಿಯಾಗಿ ನೀಡುವ ಉತ್ತರಗಳು ನೆಟ್ಟಿಗರ ಹೃದಯ ಗೆಲ್ಲುತ್ತಿವೆ. ಅವರ ಉತ್ತರಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ.
ಹೌದು, ವಿಶ್ವಜೀತ್ ದ್ವಿವೇದಿ ಎಂಬಾತ ತನ್ನ ಪ್ರೇಯಸಿಯನ್ನು ಭೇಟಿಯಾಗುವ ಬಗ್ಗೆ ಹೀಗೊಂದು ಟ್ವೀಟ್ ಮಾಡಿದ್ದ. ’ಅಣ್ಣ, ನನ್ನ ಪ್ರೇಯಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡಿ. ಬಿಹಾರಕ್ಕೆ ಹೋಗಬೇಕಾಗಿದೆ’ ಎಂದಿದ್ದ. ಅದಕ್ಕೆ ಸೋನು ಸೂದ್ ಅಷ್ಟೇ ಮಜವಾಗಿ ಉತ್ತರ ಕೊಟ್ಟಿದ್ದರು. ಆ ಉತ್ತರ ಸದ್ಯ ಎಲ್ಲೆಡೆ ಹರಿದಾಡಿ, ಮೆಚ್ಚುಗೆ ಜತೆಗೆ ಸೋನು ಸೋದ್ ಹಾಸ್ಯವನ್ನು ಮನಸಾರೆ ಇಷ್ಟಪಡುತ್ತಿದ್ದಾರೆ. ‘ಒಂದಷ್ಟು ದಿನ ದೂರ ಇದ್ದು ನೋಡಿ ಬ್ರದರ್, ಅಸಲಿ ಪ್ರೀತಿಯ ಪರೀಕ್ಷೆ ನಡದೇ ಬಿಡಲಿ’ ಎಂದಿದ್ದಾರೆ.
ಇದು ಒಂದು ಕಡೆಯಾದರೆ, ಇತ್ತೀಚೆಗಷ್ಟೇ ಒಬ್ಬ ಆಸಾಮಿ, ‘ನಾನು ಸದ್ಯ ಮನೆಯಲ್ಲಿದ್ದೇನೆ. ದಯವಿಟ್ಟು ನನ್ನನ್ನು ವೈನ್ ಶಾಪ್ವರೆಗೂ ಬಿಡಿ‘ ಎಂದು ಕೇಳಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಸೋನು, ‘ನೋಡಿ ಬ್ರದರ್. ವೈನ್ ಶಾಪ್ನಿಂದ ಮನೆವರೆಗೂ ಬಿಡಲು ಸಹಾಯ ಮಾಡಬಹುದು’ ಎಂದಿದ್ದರು. ಹೀಗೆ ಒಳ್ಳೇ ಕೆಲಸದ ಮೂಲಕ ನೆಟ್ಟಿಗರ ಮನವನ್ನೂ ಗೆಲ್ಲುತ್ತಿದ್ದಾರೆ ಸೋನು ಸೂದ್. (ಏಜೆನ್ಸೀಸ್)