ಪೊಲೀಸ್​ ಆಗುವ ಕನಸು ಕಂಡಿದ್ದ ಯುವತಿಗೆ ಸೋನು ಸೂದ್​ ಶ್ರೀರಕ್ಷೆ

sonu-1594775277
Published on

ದೆಹಲಿ: ಬಾಲಿವುಡ್​ ನಟ ಸೋನು ಸೂದ್​ ಒಂದಲ್ಲ ಒಂದು ಕಾರಣಕ್ಕೆ ಸದ್ಯ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಲಾಕ್​ಡೌನ್​ ಬಳಿಕ ಅವರ ಸಮಾಜ ಸೇವೆ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಲಕ್ಷಾಂತರ ಮಂದಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಇನ್ನೊಂದು ಕೆಲಸ ಸೇರ್ಪಡೆಯಾಗಿದೆ.

ಹೌದು, ದೆಹಲಿಯ ಸೋನಿಪತ್​ನಲ್ಲಿರುವ ಪೂಜಾ ಎಂಬ ಯುವತಿ ಪೊಲೀಸ್​ ಆಗುವ ಕನಸು ಕಂಡಿದ್ದಳು. ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದಳು. ಆದರೆ, ಮನೆಯಲ್ಲಿನ ಕಡುಬಡತನದಿಂದ ಓದಲು ಅಗತ್ಯ ಪುಸ್ತಕಗಳು ಲಭ್ಯ ಇರಲಿಲ್ಲ. ಆ ಎಲ್ಲ ವಿಚಾರವನ್ನು ಟ್ವೀಟ್​ ಮೂಲಕ ಸೋನು ಸೂದ್​ಗೆ ರವಾನಿಸಿದ್ದಳು. ಹಾಗಾದರೆ ಮುಂದೇನಾಯ್ತು?

‘ಸೋನು ಸೂದ್​ ಸರ್​, ನಾನು ಪೂಜಾ ಸೋನಿಪತ್​ನವಳು. ನಾನು ದೆಹಲಿಯ ಪೊಲೀಸ್​ ಭರ್ತಿಗೆ ಅರ್ಜಿ ಸಲ್ಲಿಸಿದ್ದೇನೆ. ಪರೀಕ್ಷೆ ತಯಾರಿಗಾಗಿ ಹಣಕಾಸಿನ ಅಗತ್ಯವಿದೆ. ಅದಕ್ಕೆ ನಮ್ಮ ಕುಟುಂಬ ಸಹಕರಿಸುತ್ತಿಲ್ಲ. ಹಾಗಾಗಿ ದೆಹಲಿಯ ಮುಖರ್ಜಿನಗರದಲ್ಲಿರುವ ಫ್ರಂಟ್​ಲೈನ್ ಕೋಟಿಂಗ್​ ಸಂಸ್ಥೆಯಲ್ಲಿ ಕೋಚಿಂಗ್​ ಪಡೆಯಬೇಕೆಂದುಕೊಂಡಿದ್ದೇನೆ. ದಯಮಾಡಿ ಸಹಾಯ ಮಾಡಿ’ ಎಂದು ಪೂಜಾ ಟ್ವಿಟರ್​ನಲ್ಲಿ ಮನವಿ ಮಾಡಿದ್ದಳು.

ಅದಕ್ಕೆ ಪ್ರತಿಯಾಗಿ, ‘ನಿಮ್ಮ ಕೋಟಿಂಗ್​ ಅಡ್ಮಿಷನ್​ ಆಗಿದೆ. ನೀವಿನ್ನು ಪೊಲೀಸ್ ಭರ್ತಿಗಾಗಿ ತರಬೇತಿ ಪಡೆದು, ದೇಶದ ಸೇವೆ ಮಾಡಿ’ ಎಂದು ಸೋನು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net