ಸದ್ದಿಲ್ಲದೇ ನಡೆಯಿತಾ ಶ್ರೀದೇವಿ ಪುತ್ರಿ ಜಾಹ್ನವಿ ಕಲ್ಯಾಣ?; ಫೋಟೋಗಳು ಇಲ್ಲಿವೆ...

Janu (3)
Published on

 ಭಾರತೀಯ ಸಿನಿಮಾರಂಗದ ಲೇಡಿ ಸೂಪರ್​ಸ್ಟಾರ್ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಇದೀಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಮದುವೆ! ಹೌದು, ಸೋಷಿಯಲ್​ ಮೀಡಿಯಾದಲ್ಲಿ ಜಾಹ್ನವಿ ಹಂಚಿಕೊಂಡ ಒಂದಷ್ಟು ಫೋಟೋಗಳು ಇದೀಗ ಕುತೂಹಲಕ್ಕೆ ಕಾರಣವಾಗಿವೆ. ಮದುಮಗಳ ಲುಕ್​ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿರುವುದರಿಂದ ಎಷ್ಟೋ ಮಂದಿ ನೆಟ್ಟಿಗರು, ಮದುವೆಯಾಯಿತೇ? ಎಂದು ಪ್ರಶ್ನಿಸಿದ್ದಾರೆ. ಆದರೆ, ಜಾಹ್ನವಿ ಹಂಚಿಕೊಂಡ ಫೋಟೋಗಳು ಖಾಸಗಿ ಕಂಪನಿಯೊಂದರ ಜಾಹೀರಾತಿನ ಫೋಟೋಗಳು. ಇನ್ನು ಕೆಲವರು ಜಾಹ್ನವಿ ಅವತಾರ ನೋಡಿ, ಥೇಟ್​ ಶ್ರೀದೇವಿಯವರನ್ನೇ ನೋಡಿದಂತೆ ಭಾಸವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮದುಮಗಳ ಅವತಾರದಲ್ಲಿ ಜಾಹ್ನವಿ ಹೇಗೆ ಕಾಣಿಸುತ್ತಾರೆ ಎಂಬುದಕ್ಕೆ ಇಲ್ಲಿ ಫೋಟೋಗಳಿವೆ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net