

ಬಾಲಿವುಡ್ ನಟ ಸೋನು ಸೂದ್ ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ಜನರಿಗೆ ಉದ್ಯೋಗ ಭರವಸೆ, ನಿರಾಶ್ರಿತರಿಗೆ ಕಾಲಕಲ್ಪ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಕೃಷಿ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡುಗೆ ಸೇರಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇದೀಗ ಇದೇ ಸೋನು ಸೂದ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಲಿಕ್ಕರ್ ದುರಂತದಲ್ಲಿ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಸಾವನ್ನಪ್ಪಿದ ಕುಟುಂಬಕ್ಕೆ ಸೋನು ಆಧಾರವಾಗಿದ್ದಾರೆ.
ಇದನ್ನೂ ಓದಿ: ಮತ್ತೆ ಡೈರೆಕ್ಷನ್ ಮಾಡೋಕೆ ರೆಡಿಯಾದ ಕಂಗನಾ …
ಪಂಜಾಬ್ನಲ್ಲಿ ಆ ಮಕ್ಕಳ ಸ್ಥಿತಿ ಕಂಡು ನೆಟ್ಟಿಗರೊಬ್ಬರು ಸೋನು ಸೂದ್ಗೆ ಟ್ವಿಟ್ ಮಾಡಿದ್ದರು. ಅದರ ಅನ್ವಯ ಪ್ರತಿಕ್ರಿಯಿಸಿದ ಸೋನು, ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸುಸಜ್ಜಿತ ಮನೆ ಮತ್ತು ವಿದ್ಯಾಭ್ಯಾಸದ ಜತೆಗೆ ಅವರ ಉಜ್ವಲ ಭವಿಷ್ಯದ ಹೊಣೆ ನನ್ನದು. ನಾಳೆಯೇ ಈ ಬಗ್ಗೆ ಸಂಪರ್ಕಿಸುತ್ತೇನೆ’ ಎಂದು ಟ್ವಿಟ್ ಮಾಡಿದ್ದಾರೆ.
ಈಗಷ್ಟೇ ಮಾಸ್ಕೋದಲ್ಲಿ ಸಿಲುಕಿದ್ದ 100 ಕ್ಕೂ ಅಧಿಕ ತಮಿಳುನಾಡಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆಸಿಕೊಂಡಿದ್ದರು ಸೋನು. ಇದೀಗ ಚೆನ್ನೈನ ಹಲವು ಹೋಟೆಲ್ಗಳಲ್ಲಿ ಆ ವಿದ್ಯಾರ್ಥಿಗಳೆಲ್ಲ ಕ್ವಾರಂಟೈನ್ನಲ್ಲಿದ್ದಾರೆ.
ವಿಡಿಯೋ ಗೇಮ್ ಸಲುವಾಗಿ ಟ್ವಿಟರ್ನಲ್ಲಿ ಸೋನುಗೆ ಬಾಲಕನೊಬ್ಬ ಬೇಡಿಕೆ ಇಟ್ಟಿದ್ದ. ಅದಕ್ಕೆ ಪ್ರತಿಕ್ರಿಯಸಿದ ಸೋನು, ನಿನ್ನ ಬಳಿ ಈ ಸಮಯದಲ್ಲಿ ಪಿಎಸ್4 ಇಲ್ಲದಿರುವುದೇ ಉತ್ತಮ. ಸಾಧ್ಯವಾದಷ್ಟು ಪುಸ್ತಕಗಳನ್ನು ಓದು. ಬೇಕಾದರೆ, ನಿನಗೆ ಪುಸ್ತಕಗಳನ್ನು ನಾನು ತಲುಪಿಸಬಲ್ಲೆ’ ಎಂದಿದ್ದರು. (ಏಜೆನ್ಸೀಸ್)