More

    ಹಳದಿ ಹಲ್ಲಿನ ಸಮಸ್ಯೆ ಕಾಡುತ್ತಿದ್ಯಾ?: ಪವರ್ ಫುಲ್ ಮನೆಮದ್ದು ಇಲ್ಲಿದೆ…

    ಬೆಂಗಳೂರು: ಹಳದಿ ಹಲ್ಲುಗಳು ನಿಮಗೆ ಮುಜುಗರ ಉಂಟು ಮಾಡುತ್ತಿದ್ಯಾ? ಹಲ್ಲುಗಳ ಬಣ್ಣವನ್ನು ಕ್ರಮೇಣವಾಗಿ ಬಿಳಿ ಬಣ್ಣಕ್ಕೆ ತಿರುಗಿಸಬೇಕು ಎಂದು ನೀವು ಅಂದು ಕೊಂಡಿದ್ದರೆ, ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವ ಮನೆ ಮದ್ದಗಳನ್ನು ಒಮ್ಮೆ ಬಳಸಲು ಯೋಚನೆ ಮಾಡ್ತಾ ಇದ್ದೀರಾ..? ಹಾಗಿದ್ದರೆ ಈ ಸಲಹೆಗಳು ನಿಮಗಾಗಿ…

    ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.

    ನೀರು,  ಲಿಂಬೆ ಹಣ್ಣಿನ ರಸ ಅದರಲ್ಲಿ ಮಿಶ್ರಣಮಾಡಿ ಬಾಯಿ ತೊಳೆದುಕೊಳ್ಳಬಹುದು. ಆದರೆ ವಾರದಲ್ಲಿ ಎರಡ ಕ್ಕಿಂತ ಹೆಚ್ಚು ಬಾರಿ ಇದನ್ನು ಮಾಡುವಂತಿಲ್ಲ.

    ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

    ಇದನ್ನೂ ಓದಿ: ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ ಬರುವ ವೇಳೆ ಅಮಾನುಷವಾಗಿ ಹಲ್ಲೆ: ರಕ್ಷಿಸಲು ಬಂದ ದಾರಿಹೋಕರಿಗೆ ಚೂರಿ ಇರಿತ

    ಸ್ಟ್ರಾಬೆರಿ ಹಣ್ಣುಗಳಿಂದ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳುವುದು ಬಹಳ ಸುಲಭವಾಗಿದೆ. ಇದಕ್ಕಾಗಿ ನೀವು ಒಂದು ಅಥವಾ ಎರಡು ಸ್ಟ್ರಾಬೆರಿ ಹಣ್ಣುಗಳನ್ನು ಬಳಕೆ ಮಾಡಿಕೊಳ್ಳಬಹುದು.

    ಸ್ಟ್ರಾಬೆರಿ ಹಣ್ಣುಗಳನ್ನು ನೀವು ಮೊದಲು ಚೆನ್ನಾಗಿ ಜಜ್ಜಿ ಅವುಗಳಿಂದ ರಸ ತೆಗೆದು ಅದನ್ನು ನಿಮ್ಮ ಹಲ್ಲುಗಳ ಮೇಲೆ ಮೂರು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ ಆನಂತರದಲ್ಲಿ ನೀವು ನೀರಿನಿಂದ ಬಾಯಿ ಮುಕ್ಕಳಿಸಿ ಸಾಧಾರಣವಾಗಿ ಟೂತ್ ಪೇಸ್ಟ್ ನಿಂದ ಹಲ್ಲುಜ್ಜಬಹುದು.

    ಕ್ಯಾರೆಟ್ ನಿಂದ ಸಹ ನೈಸರ್ಗಿಕವಾಗಿ ನಿಮ್ಮ ಹಲ್ಲುಗಳ ಸ್ವಚ್ಛತೆಯಲ್ಲಿ ಒಳ್ಳೆಯ ಫಲಿತಾಂಶ ಕಾಣ ಬಹುದು. ನೈಸರ್ಗಿಕವಾಗಿ ನಿಮ್ಮ ಹಲ್ಲುಗಳ ಮೇಲಿನ ಕಲೆಗಳನ್ನು ಹೋಗಲಾಡಿಸುವಲ್ಲಿ ಕ್ಯಾರೆಟ್ ಪ್ರಮುಖ ಪಾತ್ರವಹಿಸುತ್ತದೆ.

    ಕಹಿ ಬೇವು ಒಂದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒಂದು ಅಥವಾ ಎರಡು ಹನಿಗಳಷ್ಟು ಲಿಂಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ0ದ ನಿಮ್ಮ ಹಳದಿ ದಂತಪಂಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ.

    ಕಾಂಗ್ರೆಸ್​​​ ಅಮಲನ್ನು ಲೋಕಸಭಾ ಚುನಾವಣೆಯಲ್ಲಿ ಇಳಿಸಬೇಕು: ಕೆ. ಎಸ್ ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts