More

    ಕಾಂಗ್ರೆಸ್​​​ ಅಮಲನ್ನು ಲೋಕಸಭಾ ಚುನಾವಣೆಯಲ್ಲಿ ಇಳಿಸಬೇಕು: ಕೆ. ಎಸ್ ಈಶ್ವರಪ್ಪ

    ಶಿವಮೊಗ್ಗ: ಕಾಂಗ್ರೆಸ್ ಪಕ್ಷದವರು ಸರ್ಕಾರ ಬಂದಿದೆ ಎಂಬ ಅಮಲಿನಲ್ಲಿದ್ದಾರೆ, ಅವರ​​​ ಅಮಲನ್ನು ಲೋಕಸಭಾ ಚುನಾವಣೆಯಲ್ಲಿ ಇಳಿಸಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಹರಿಹಾಯ್ದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸರ್ಕಾರ ಬಂದಿದೆ ಎಂಬ ಅಮಲಿನಲ್ಲಿದ್ದಾರೆ. ಅಮಲಿನಲ್ಲಿ ಅನೇಕ ಮಾತುಗಳನ್ನು ಆಡುತ್ತಿದ್ದಾರೆ. ಆರ್​ಎಸ್​ಎಸ್​​ ಬ್ಯಾನ್​​ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ಬುದ್ಧಿವಂತರಾಗಿದ್ದಾರೆ. ಆರ್​ಎಸ್​ಎಸ್​​ ಬ್ಯಾನ್​​ ಮಾಡುವ ಯೋಜನೆ ನಮ್ಮ ಸರ್ಕಾರಕ್ಕೆ ಇಲ್ಲ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಯಾಕೆ ಆ ಮಾತನ್ನ ಹೇಳಿದರು ಎಂದು ಪ್ರಶ್ನೆ ಮಾಡಿದ್ದಾರೆ.

    ಬಿಜೆಪಿ ಕೇವಲ 66 ಸೀಟುಗಳನ್ನು ಪಡೆದಿದ್ದರೂ ಕೂಡ 0.6% ವೋಟ್​ಗಳನ್ನು ಹೆಚ್ಚಿಗೆ ಪಡೆದಿದ್ದೇವೆ. ಮೈಸೂರು ಭಾಗದಲ್ಲೂ ಕೂಡ ಬಿಜೆಪಿ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಗೆ ಜನರು ಮತವನ್ನು ಚಲಾಯಿಸಿದ್ದಾರೆ. ಜಾತಿ ಲೆಕ್ಕಾಚಾರ ಮಾಡದೆ ಬಿಜೆಪಿಗೆ ಜನರು ಮತವನ್ನು ನೀಡಿದ್ದಾರೆ. ಇದು ಬಿಜೆಪಿಗೆ ಸಿಕ್ಕ ದೊಡ್ಡ ಜಯ ಎಂದು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.

    ಇದನ್ನೂ ಓದಿ: ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ ಬರುವ ವೇಳೆ ಅಮಾನುಷವಾಗಿ ಹಲ್ಲೆ: ರಕ್ಷಿಸಲು ಬಂದ ದಾರಿಹೋಕರಿಗೆ ಚೂರಿ ಇರಿತ

    ಗೆದ್ದಿರುವುದು ನಿಜ ಯಾವ ಗ್ಯಾರಂಟಿಯ ಮೇಲೆ ಗೆದ್ದರೂ ಯಾವ ಜಾತಿ ಹೆಸರು ಹೇಳಿ ಗೆದ್ದರೂ ಅದನ್ನ ವಿವರಿಸೋದಕ್ಕೆ ಹೋಗುವುದಿಲ್ಲ. ಪತ್ರಿಕೆಗಳು ಹಾಗೂ ಮಾಧ್ಯಮಗಳನ್ನ ನೋಡುವ ನಿಮಗೆ ದಿನ ರಾಜಕೀಯದ ಬಗ್ಗೆ ಗೊತ್ತಿದೆ. ಜನರು ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಅವರು ಒಪ್ಪಿದ್ದ ಕಾರಣಕ್ಕೋಸ್ಕರನೇ ಬಿಜೆಪಿಗೆ 0.6 ಮತ ಹೆಚ್ಚಾಗಿದೆ. ಅನೇಕರಿಗೆ ಸೀಟ್ ಕಳೆದುಕೊಂಡಿರುವುದು ಬೇಸರ ತಂದಿರೋದು ನಿಜ. ಯಾವಾಗ ಚುನಾವಣೆ ಬಂದರೂ ರಾಜ್ಯ ಹಾಗೂ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವುದು.ಈ ದಿಕ್ಕಿನಲ್ಲಿ ನಾವು ಲೋಕಸಭಾ ಚುನಾವಣೆಗೆ ಇಳಿಯಬೇಕಿದೆ ಎಂದಿದ್ದಾರೆ.

    ಸ್ನೇಹಿತರ ಜತೆ ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆ ಪಾಲು; ಮುಗಿಲು ಮುಟ್ಟಿದ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts