ಯೋಧರಲ್ಲೂ ಹೃದಯಾಘಾತ ಹೆಚ್ಚಳ?; ಕರ್ತವ್ಯನಿರತ ಸೈನಿಕ ಹೃದಯಾಘಾತದಿಂದ ಸಾವು

Soldier
Published on

ಕೊಡಗು: ಇತ್ತೀಚೆಗೆ ಜನರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಹೆಚ್ಚಾಗಿದ್ದು, ಕರ್ತವ್ಯನಿರತ ಯೋಧರಲ್ಲೂ ಇಂಥ ಪ್ರಕರಣಗಳು ಮೇಲಿಂದ ಮೇಲೆ ಕಂಡುಬಂದಿವೆ. ಇದೀಗ ಆ ಪಟ್ಟಿಗೆ ಯೋಧರೊಬ್ಬರ ಸಾವು ಸೇರ್ಪಡೆಯಾಗಿದೆ. ಕೊಡಗು ಮೂಲದ ಸೈನಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಮಹೇಶ್ (46) ಸಾವಿಗೀಡಾದ ಯೋಧ. ಜೂನಿಯರ್ ಕಮಿಷನ್ ಆಫೀಸರ್ (ಜೆಸಿಒ) ಆಗಿ ಇವರು ಉತ್ತರಾಖಂಡದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯನಿರತರಾಗಿದ್ದಾಗಲೇ ಈ ಸಾವು ಸಂಭವಿಸಿದೆ. ಪತ್ನಿ, ಇಬ್ಬರು ಚಿಕ್ಕಮಕ್ಕಳನ್ನು ಅಗಲಿರುವ ಇವರು ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ದರು.

ಮಹೇಶ್ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ‌ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರು, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು. ಇನ್ನೆರಡು ದಿನಗಳಲ್ಲಿ ಹುಟ್ಟೂರಿಗೆ ಇವರ ಪಾರ್ಥಿವ ಶರೀರ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net