More

    ಕೊನೆಗೂ 36 ವರ್ಷಗಳ ನರಕಯಾತನೆಯಿಂದ ಬಿಡುಗಡೆ; ಮಗಳನ್ನು ಕತ್ತಲೆ ಕೋಣೆಯಲ್ಲಿ ಬಂಧಿಸಿಟ್ಟಿದ್ದ ತಂದೆ!

    ಉತ್ತರಪ್ರದೇಶ: ಈಕೆಗೆ ಈಗ 53 ವರ್ಷ, ಆದರೆ ತನ್ನ ಜೀವನದ 36 ವರ್ಷಗಳನ್ನು ಈಕೆ ಕತ್ತಲೆ ಕೋಣೆಯಲ್ಲೇ ಕಳೆದಿದ್ದಾಳೆ. ಕೊನೆಗೂ ಅಲ್ಲಿನ 36 ವರ್ಷಗಳ ನರಕಯಾತನೆಯಿಂದ ಈಕೆಗೆ ಇಂದು ಬಿಡುಗಡೆ ಸಿಕ್ಕಿದೆ. ದುರಂತವೆಂದರೆ ಈಕೆಯನ್ನು ಮನೆಯವರೇ ಹೀಗೆ ಕೂಡಿಹಾಕಿದ್ದರು!

    36 ವರ್ಷಗಳ ನರಕಯಾತನೆಯನ್ನು ಅನುಭವಿಸಿರುವ ಈಕೆಯ ಹೆಸರು ಸಪ್ನಾ ಜೈನ್. ಈಕೆ ಮಾನಸಿಕ ಅಸ್ವಸ್ಥೆ ಎಂದು ತಂದೆಯೇ ಕತ್ತಲೆಯ ಕೋಣೆಯಲ್ಲಿ ಸರಪಳಿಯಲ್ಲಿ ಬಂಧಿಸಿ ಕೂಡಿ ಹಾಕಿದ್ದರು. ಈಕೆಗೆ ಬಾಗಿಲ ಕೆಳಗಿನ ಸಂದಿಯಿಂದ ಊಟ ನೀಡಲಾಗುತ್ತಿತ್ತು. ಹೊರಗಿನಿಂದ ಈಕೆಯ ಮೈಮೇಲೆ ನೀರೆರಚಿದರೆ ಅದೇ ಸ್ನಾನ.

    ಈ ಕುರಿತು ಹತ್ರಾಸ್​ನ ಬಿಜೆಪಿ ಶಾಸಕಿ ಅಂಜುಳಾ ಮಹೌರ್​ಗೆ ವಿಷಯ ಗೊತ್ತಾಗಿದ್ದು, ಈಕೆ ಸ್ಥಳೀಯ ಎನ್​ಜಿಒ ಸೇವಾ ಭಾರತಿಗೆ ಮಾಹಿತಿ ನೀಡಿ ಸಪ್ನಾಳನ್ನು ನರಕಯಾತನೆಯಿಂದ ಪಾರು ಮಾಡಿದ್ದಾರೆ. ಸಪ್ನಾಳ ತಂದೆ ಇತ್ತೀಚೆಗಷ್ಟೇ ನಿಧನರಾಗಿದ್ದು, ಆ ಬಳಿಕ ಸ್ನೇಹ ಭಾರತಿಯ ಮಹಿಳೆಯರ ಒಂದು ತಂಡ ಅಲ್ಲಿಗೆ ತೆರಳಿ ಸಪ್ನಾಳನ್ನು ರಕ್ಷಿಸಿದೆ.

    ನಾವು ಸಪ್ನಾಳನ್ನು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿ ಕಂಡೆವು. ಆಕೆಯ ಕೊಳೆಯಾದ ಬಟ್ಟೆ ಧರಿಸಿದ್ದು, ಮೈಯೆಲ್ಲ ಮಣ್ಣಾಗಿತ್ತು. ಆಕೆಗೆ ಸ್ನಾನ ಮಾಡಿಸಿ, ಬೇರೆ ಬಟ್ಟೆ ತೊಡಿಸಿ ಕರೆದುಕೊಂಡು ಬಂದೆವು ಎಂಬುದಾಗಿ ಸೇವಾ ಭಾರತಿಯ ಹಿರಿಯ ಸದಸ್ಯೆ ನಿರ್ಮಲಾ ಸಿಂಗ್ ಹೇಳಿಕೊಂಡಿದ್ದಾರೆ.

    ಶಾಸಕಿ ಸಪ್ನಾ ಕುಟುಂಬಸ್ಥರ ಜತೆ ಮಾತನಾಡಿ, ಆಕೆಯನ್ನು ಆಗ್ರಾದಲ್ಲಿನ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಪ್ನಾಳನ್ನು ಅಪ್ರಾಪ್ತ ವಯಸ್ಕಳಾಗಿದ್ದಾಗಲೇ ಕೂಡಿ ಹಾಕಲಾಗಿತ್ತು. ತನ್ನ 17ನೇ ವಯಸ್ಸಿನ ಬಳಿಕ ಆಕೆ ಹೊರಪ್ರಪಂಚವನ್ನೇ ನೋಡಿಲ್ಲ. ನನಗೆ ಈ ಬಗ್ಗೆ ಗೊತ್ತಾದ ಬಳಿಕ ಏನಾದರೂ ಸಹಾಯ ಮಾಡಲೇಬೇಕು ಎಂದು ನಿರ್ಧರಿಸಿದೆ ಎಂಬುದಾಗಿ ಶಾಸಕಿ ತಿಳಿಸಿದ್ದಾರೆ.

    ಸಪ್ನಾಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ವೈದ್ಯ ಜ್ಞಾನೇಂದ್ರ ಸಿಂಗ್, ಸಪ್ನಾ ಬೇಗ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಕೆಯ ಅವಸ್ಥೆಯ ಕುರಿತು ಮನೆಯವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿರುವ ವೈದ್ಯರು, ಸಪ್ನಾ ಕೆಲವು ವಾರಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ತೋರಿದ್ದಾರೆ.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಫಲಿಸಲಿಲ್ಲ 45 ದಿನಗಳ ಜೀವನ್ಮರಣ ಹೋರಾಟ; ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಸಾವು

    ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

    ಪುನೀತ್​ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸಂಗತಿ: ‘ಗಂಧದಗುಡಿ’ ಜೊತೆಗೇ ‘ಅಪ್ಪು ಕಪ್’ ಸಂಭ್ರಮ

    ಊರನ್ನು ಮಿನಿ ಪಾಕಿಸ್ತಾನಕ್ಕೆ ಹೋಲಿಸಿದವನ ಬಂಧನ; ಈದ್ ಮಿಲಾದ್ ಕುರಿತು ಅವಹೇಳನಕಾರಿ ಪೋಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts