‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್ ಶೆಟ್ಟಿ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ’ ಸಿನಿಮಾ, ದಿನೇದಿನೆ ಭಾರಿ ಮೆಚ್ಚುಗೆ ಗಳಿಸುತ್ತಿರುವುದು ಮಾತ್ರವಲ್ಲದೆ, ಹೌಸ್​ಫುಲ್​ ಪ್ರದರ್ಶನವನ್ನೂ ಕಾಣುತ್ತಿದೆ. ಅಷ್ಟೇ ಅಲ್ಲ, ಹಲವು ಪ್ರಥಮಗಳಿಗೆ ಪಾತ್ರವಾಗುತ್ತಿರುವ ಈ ಚಿತ್ರ ಇದೀಗ ಮತ್ತೊಂದು ದಾಖಲೆಗೂ ಭಾಜನವಾಗಿದೆ. ನಿನ್ನೆಯಷ್ಟೇ ಮುಂಬೈನಲ್ಲಿ ಎರಡು ಪ್ರಥಮಗಳ ಗರಿಯನ್ನು ಮುಡಿಗೇರಿಸಿಕೊಂಡ ಕಾಂತಾರ, ಇಂದು ಇನ್ನೊಂದು ಪ್ರಥಮಕ್ಕೂ ಪಾತ್ರವಾಗಿದೆ. ಮುಂಬೈನ ಮರಾಠ ಚಿತ್ರಮಂದಿರಲ್ಲಿ ಇದುವರೆಗೆ ದಕ್ಷಿಣ ಭಾರತದ ಯಾವುದೇ ಸಿನಿಮಾ ಹಿಂದಿಗೆ ಡಬ್ಬಿಂಗ್ ಆಗದೆ ಪ್ರದರ್ಶನಗೊಂಡಿಲ್ಲ. ಆದರೆ … Continue reading ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!