More

    ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

    ಉತ್ತರಕನ್ನಡ: ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರಕನ್ನಡ ಜಿಲ್ಲೆಯವರು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮೇಲಿಂದ ಮೇಲೆ ಬೇಡಿಕೆ ಸಲ್ಲಿಸಿ, ಅದು ಈಡೇರದೆ ಬೇಸರಗೊಂಡು ಇದೀಗ ಇನ್ನೊಂದು ರೀತಿಯ ಅಭಿಯಾನಕ್ಕೆ ಮುಂದಾಗಿದ್ದಾರೆ.

    ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜನರು ಪರದಾಡುತ್ತಿರುವುದು, ಅಪಘಾತ ಹಾಗೂ ತೀವ್ರ ಅನಾರೋಗ್ಯದಂಥ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿರುವುದು ಹೊಸದೇನಲ್ಲ.

    ಕೆಲವು ದಿನಗಳ ಹಿಂದೆ ಇಲ್ಲೊಂದು ಆ್ಯಂಬುಲೆನ್ಸ್ ಟೋಲ್​ ಗೇಟ್ ಬಳಿ ಅಪಘಾತಕ್ಕೀಡಾಗಿ ನಾಲ್ವರು ಸಾವಿಗೀಡಾಗಿದ್ದರು. ಆ ನಂತರ ಇಲ್ಲಿನ ಜನರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಇಲ್ಲೀಗ ಫಲಕವೊಂದರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಗೆ ಅಗತ್ಯ ಇವರು ಆಸ್ಪತ್ರೆ ಬೇಡಿಕೆ ಕುರಿತು ಗಮನ ಸೆಳೆಯಲು ಕೆಲವರು ಮುಂದಾಗಿದ್ದಾರೆ.

    ವಾಹನ ಸವಾರರಿಗೆ ವಿಶೇಷ ಸೂಚನೆ, ನಿಮ್ಮ ಜೀವಕ್ಕೆ ನೀವೇ ಹೊಣೆ: ಆಸ್ಪತ್ರೆಗಾಗಿ ಹೀಗೊಂದು ಹೊಸ ಥರದ ಫಲಕ

    ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಅತಿದೊಡ್ಡ ಜಿಲ್ಲೆ ಉತ್ತರಕನ್ನಡಕ್ಕೆ ಸ್ವಾಗತ ಎಂದು ಫಲಕವೊಂದರ ಮೂಲಕ ಹೇಳುತ್ತಲೇ ಸ್ಥಳೀಯರು ಎಚ್ಚರಿಕೆಯೊಂದನ್ನು ಕೂಡ ನೀಡಲಾರಂಭಿಸಿದ್ದಾರೆ. “ವಾಹನ ಸವಾರರಿಗೆ ವಿಶೇಷ ಸೂಚನೆ”, ಇಲ್ಲಿ ಅಪಘಾತವಾದರೆ ಉತ್ತರ- ದಕ್ಷಿಣಕ್ಕೆ 150 ಕಿ.ಮಿ. ದೂರದವರೆಗೂ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಇರುವುದಿಲ್ಲ. “ಇಲ್ಲಿ ನಿಮ್ಮ ಜೀವಕ್ಕೆ ನೀವೇ ಹೊಣೆ” ಸುರಕ್ಷಿತವಾಗಿ ಸೇರಲಿ ನಿಮ್ಮ ಕುಟುಂಬ, ಜನಹಿತಕ್ಕಾಗಿ ಜಾರಿ.. ಎಂಬ ಈ ಫಲಕ ಪ್ರದರ್ಶಿಸಲಾಗುತ್ತಿದೆ. ಆದರೆ ಅದನ್ನು ಶಾಸಕರು ತೆಗೆಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಕೆಲವು ಉತ್ತರಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆ ಫಲಕದ ಫೋಟೋ ಹಂಚಿಕೊಂಡು, ‘ಇಲ್ಲಿಂದ ತೆಗೆಸಿ ನೋಡೋಣ’ ಎಂದೂ ಅಭಿಯಾನ ಮುಂದುವರಿಸಿದ್ದಾರೆ.

    ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts