ಫಲಿಸಲಿಲ್ಲ 45 ದಿನಗಳ ಜೀವನ್ಮರಣ ಹೋರಾಟ; ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಸಾವು

ಚನ್ನಪಟ್ಟಣ: ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ 45 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ತೀವ್ರವಾದ ಗಾಯಗಳಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ. ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಸೌಂದರ್ಯ ಅರಸ್ (20) ಮೃತಪಟ್ಟ ಯುವತಿ. ಈಕೆ ಆಗಸ್ಟ್ 24ರಂದು ದ್ವಿಚಕ್ರ ವಾಹನದಲ್ಲಿ ಸಂಬಂಧಿಯ ಜೊತೆ ತೆರಳುವ ವೇಳೆ ನಗರದ ಸಿಪಿಟಿ ಗಾರ್ಡನ್ ಮುಂಭಾಗದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಕೆಳಗೆ ಬಿದ್ದ ಸೌಂದರ್ಯ ಅವರ ತಲೆಯ … Continue reading ಫಲಿಸಲಿಲ್ಲ 45 ದಿನಗಳ ಜೀವನ್ಮರಣ ಹೋರಾಟ; ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಸಾವು