More

    ಫಲಿಸಲಿಲ್ಲ 45 ದಿನಗಳ ಜೀವನ್ಮರಣ ಹೋರಾಟ; ಗಂಭೀರವಾಗಿ ಗಾಯಗೊಂಡಿದ್ದ ಯುವತಿಯ ಸಾವು

    ಚನ್ನಪಟ್ಟಣ: ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ 45 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ತೀವ್ರವಾದ ಗಾಯಗಳಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಸೌಂದರ್ಯ ಅರಸ್ (20) ಮೃತಪಟ್ಟ ಯುವತಿ. ಈಕೆ ಆಗಸ್ಟ್ 24ರಂದು ದ್ವಿಚಕ್ರ ವಾಹನದಲ್ಲಿ ಸಂಬಂಧಿಯ ಜೊತೆ ತೆರಳುವ ವೇಳೆ ನಗರದ ಸಿಪಿಟಿ ಗಾರ್ಡನ್ ಮುಂಭಾಗದ ರಸ್ತೆಯಲ್ಲಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಕೆಳಗೆ ಬಿದ್ದ ಸೌಂದರ್ಯ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗೊಂಡು ಕೋಮಾಗೆ ತೆರಳಿದ್ದರು. ಅವರನ್ನು ಬಿಡದಿಯ ಆರಾಧ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದಾಗ್ಯೂ ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಮೃತಪಟ್ಟಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ನೆರವು

    ಸೌಂದರ್ಯ ಅರಸು ಅವರನ್ನು ಬಿಡದಿಯ ಆರಾಧ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದೂವರೆ ತಿಂಗಳ ಚಿಕಿತ್ಸೆಗೆ ಈಗಾಗಲೇ ಕುಟುಂಬ 7 ಲಕ್ಷ ರೂ. ಬಿಲ್ ಪಾವತಿಸಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ನಿಧನರಾದ ಬಳಿಕ ಆಸ್ಪತ್ರೆ ಮುಖ್ಯಸ್ಥರು ಬಾಕಿ 9.50 ಲಕ್ಷ ರೂ. ಪಾವತಿಸಿ ಶವ ಪಡೆಯುವಂತೆ ಸೂಚಿಸಿದ್ದರು. ಇದು ಕುಟುಂಬವನ್ನು ವಿಚಲಿತಗೊಳಿಸಿತ್ತು. ಈ ವಿಚಾರವನ್ನು ಗ್ರಾಮದ ಜೆಡಿಎಸ್ ಮುಖಂಡರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಮನಕ್ಕೆ ತಂದಿದ್ದರು‌.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಆಸ್ಪತ್ರೆ ಮುಖ್ಯಸ್ಥರಿಗೆ ಕರೆ ಮಾಡಿ, ಬಾಕಿ ಬಿಲ್ ಹಣ ಪಾವತಿಸುವ ಭರವಸೆ ನೀಡಿ ಗೃಹಿಣಿಯ ಶವವನ್ನು ಕೂಡಲೇ ಕುಟುಂಬದ ಸದಸ್ಯರಿಗೆ ನೀಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಿದರು‌. ಆ ಬಳಿಕ ಆಸ್ಪತ್ರೆ ಮುಖ್ಯಸ್ಥರು ಸೌಂದರ್ಯ ಶವವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ.

    ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಕಾರಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸೌಂದರ್ಯ ಆರು ತಿಂಗಳ ಹಿಂದಷ್ಟೇ ಅದೇ ಗ್ರಾಮದ ಜಯಚಂದ್ರರಾಜ ಅರಸ್ ಅವರನ್ನು ವಿವಾಹ ಆಗಿದ್ದರು.

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts