More

    ಮಣಿಪಾಲ ಆಸ್ಪತ್ರೆಯಲ್ಲಿ ರಾಮದಾಸ್​ ಪೈ ಬ್ಲಾಕ್​ ಉದ್ಘಾಟನೆ

    ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಒಳಗೊಂಡ ಡಾ. ರಾಮದಾಸ್​ ಎಂ. ಪೈ ಬ್ಲಾಕ್​ ಅನ್ನು ಡಾ. ಟಿಎಂಎ ಪೈ 126ನೇ ಜನ್ಮ ದಿನಾಚರಣೆಯಂದು ಮಂಗಳವಾರ ಎಂಇಎಂಜಿ ಮುಖ್ಯಸ್ಥ ಹಾಗೂ ಮಾಹೆ ಟ್ರಸ್ಟ್​ ಅಧ್ಯಕ್ಷ ಡಾ.ರಂಜನ್​ ಆರ್​. ಪೈ ಹಾಗೂ ಮಾಹೆ ಟ್ರಸ್ಟಿ ವಸಂತಿ ಆರ್​. ಪೈ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್​.ಎಸ್​.ಬಲ್ಲಾಳ್​, ಮಣಿಪಾಲ್​ ಹೆಲ್ತ್​ ಎಂಟರ್​ ಪ್ರೈಸಸ್​ ಪ್ರೈ. ಲಿ. ಮುಖ್ಯಸ್ಥ ಡಾ.ಎಚ್​.ಸುದರ್ಶನ್​ ಬಲ್ಲಾಳ್​ , ಮಾಹೆ ಕುಲಪತಿ ಡಾ. ಎಂ.ಡಿ ವೆಂಕಟೇಶ್​ , ಸಹ ಕುಲಪತಿ ಡಾ.ಶರತ್​ ಕುಮಾರ್​ ರಾವ್​ , ಕುಲಸಚಿವ ಡಾ.ಗಿರಿಧರ್​ ಕಿಣಿ, ಟಿ.ಅಶೋಕ್​ ಪೈ, ಯು.ಸತೀಶ್​ ಪೈ, ಡಾ.ಕೆ.ವಿ ಕಾಮತ್​, ನಾಡೋಜ ಡಾ. ಜಿ. ಶಂಕರ್​, ಡಾ. ನಾರಾಯಣ ಸಭಾಹಿತ್​, ಸಿಜಿ ಮುತ್ತಣ್ಣ , ಡಾ.ರವಿರಾಜ್​, ಡಾ.ಪದ್ಮರಾಜ್​ ಹೆಗ್ಡೆ, ಡಾ.ಆನಂದ್​ ವೇಣುಗೋಪಾಲ್​, ಡಾ.ಅವಿನಾಶ್​ ಶೆಟ್ಟಿ ಮತ್ತು ಡಾ.ಶಿರನ್​ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಬ್ಲಾಕ್​ ವಿಶೇಷತೆ
    ರೋಗಿಗಳಿಗೆ ದೀರ್ಘಾವಧಿಯ ಕಾಯುವಿಕೆಯನ್ನು ತಪ್ಪಿಸಲು ಆನ್​ಲೈನ್​ ಅಪಾಯಿಂಟ್​ಮೆಂಟ್​ ಮತ್ತು ಆಯ್ಕೆಯ ಪರಿಣಿತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡಲು ಪ್ರೀಮಿಯಂ ಹೊರರೋಗಿ ಸಮಾಲೋಚನೆ ಸೌಲಭ್ಯ ಹೊಸ ಬ್ಲಾಕ್​ ಒಳಗೊಂಡಿದೆ. ಇದರಲ್ಲಿ 10 ಹೊರರೋಗಿ ಸಮಾಲೋಚನೆ ಕೊಠಡಿಗಳು, 34 ಡಬಲ್​ ಆಕ್ಯುಪೆನ್ಸಿ ಕೊಠಡಿಗಳು, 75 ಖಾಸಗಿ ಕೊಠಡಿಗಳು, 4 ಪ್ರಮುಖ ಸುಧಾರಿತ ಅತ್ಯಾಧುನಿಕ ಆಪರೇಷನ್​ ಥಿಯೇಟರ್​ಗಳು, 4 ಪ್ರೀಮಿಯರ್​ ಸೂಟ್​ ರೂಮ್​ಗಳೊಂದಿಗೆ 4 ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, 4 ಶಸ್ತ್ರ್ತ್ರ ಚಿಕಿತ್ಸಾ ನಂತರದ ಕೊಠಡಿಗಳು , 14 ತೀವ್ರ ನಿಗಾ ಘಟಕ ಹಾಸಿಗೆಗಳು , 10 ಎಚ್​ ಡಿ ಯು ಹಾಸಿಗೆಗಳು ಮತ್ತು 16 ಹಾಸಿಗೆಗಳ ದಿನದ ಆರೈಕೆ ಘಟಕ. ಹೀಗೆ ಹೊಸ ಬ್ಲಾಕ್​ನಲ್ಲಿ ಒಟ್ಟು 161 ಒಳರೋಗಿ ಹಾಸಿಗೆಗಳು ಒಳಗೊಂಡಿರುತ್ತದೆ. ಇಲ್ಲಿ ರಕ್ತದ ಮಾದರಿ ಸಂಗ್ರಹಣೆ, ರೋಗರ್ನಿಣಯ ಮತ್ತು ಡೇ ಕೇರ್​ ಕಾರ್ಯವಿಧಾನಗಳನ್ನು ಮಾಡಲಾಗುತ್ತದ. ಇದರಲ್ಲಿ ಇಂರ್ಟವೆನ್ಷನಲ್​ ರೇಡಿಯಾಲಜಿ ಕಾರ್ಯವಿಧಾನಗಳಿಗೆ ಉನ್ನತ-ಮಟ್ಟದ ಬೈ-ಪ್ಲೇನ್​ ಕ್ಯಾಥ್​ ಲ್ಯಾಬ್​ ಸೌಲಭ್ಯವಿದೆ. ಜೊತೆಗೆ ವಿಶೇಷವಾದ ವಿದೇಶಿ ರೋಗಿಗಳನ್ನು ಚಿಕಿತ್ಸಾ ಸೌಲಭ್ಯಗಳನ್ನು ಈ ಹೊಸ ಬ್ಲಾಕ್​ ಹೊಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts