ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

ಬೆಂಗಳೂರು: ಪ್ರೈವೆಸಿಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​-ಫೇಸ್​ಬುಕ್​ ವಿರುದ್ಧ ಈಗಾಗಲೇ ಕೆಲವು ಸಲ ಆರೋಪ ಕೇಳಿ ಬಂದಿದ್ದು, ಒಂದೆರಡು ಸಲ ಬಳಕೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಸನ್ನಿವೇಶವೂ ಸೃಷ್ಟಿಯಾಗಿತ್ತು. ಇದೀಗ ವಾಟ್ಸ್​​ಆ್ಯಪ್ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಅದನ್ನು ಬಳಸುವುದೇ ಅಪಾಯಕಾರಿ ಎನ್ನಲಾಗಿದೆ. ವಾಟ್ಸ್ಆ್ಯಪ್​ ಅಪ್ಲಿಕೇಷನ್​ ಮೊಬೈಲ್​ಫೋನ್​ನಲ್ಲಿ ಇರಿಸಿಕೊಳ್ಳುವುದು ಹ್ಯಾಕರ್​ಗಳಿಗೆ ದಾರಿ ಮಾಡಿಕೊಟ್ಟಂತೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ವಾಟ್ಸ್​ಆ್ಯಪ್ ಸಂಸ್ಥೆ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಮಾಹಿತಿಯನ್ನು ಆಧರಿಸಿಯೇ ಇಂಥದ್ದೊಂದು ಆರೋಪವನ್ನು ಮಾಡಲಾಗಿದೆ. ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; … Continue reading ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!