More

    ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

    ಬೆಂಗಳೂರು: ಪ್ರೈವೆಸಿಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​-ಫೇಸ್​ಬುಕ್​ ವಿರುದ್ಧ ಈಗಾಗಲೇ ಕೆಲವು ಸಲ ಆರೋಪ ಕೇಳಿ ಬಂದಿದ್ದು, ಒಂದೆರಡು ಸಲ ಬಳಕೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಸನ್ನಿವೇಶವೂ ಸೃಷ್ಟಿಯಾಗಿತ್ತು. ಇದೀಗ ವಾಟ್ಸ್​​ಆ್ಯಪ್ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಅದನ್ನು ಬಳಸುವುದೇ ಅಪಾಯಕಾರಿ ಎನ್ನಲಾಗಿದೆ.

    ವಾಟ್ಸ್ಆ್ಯಪ್​ ಅಪ್ಲಿಕೇಷನ್​ ಮೊಬೈಲ್​ಫೋನ್​ನಲ್ಲಿ ಇರಿಸಿಕೊಳ್ಳುವುದು ಹ್ಯಾಕರ್​ಗಳಿಗೆ ದಾರಿ ಮಾಡಿಕೊಟ್ಟಂತೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ವಾಟ್ಸ್​ಆ್ಯಪ್ ಸಂಸ್ಥೆ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಮಾಹಿತಿಯನ್ನು ಆಧರಿಸಿಯೇ ಇಂಥದ್ದೊಂದು ಆರೋಪವನ್ನು ಮಾಡಲಾಗಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ಹ್ಯಾಕರ್​ಗಳು ಹಾನಿಕಾರಕ ವಿಡಿಯೋವನ್ನು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಕಳುಹಿಸುವ ಮೂಲಕ ಇಲ್ಲವೇ ವಾಟ್ಸ್​ಆ್ಯಪ್​ ವಿಡಿಯೋ ಕಾಲ್ ಮೂಲಕ ಅಂಥ ಮೊಬೈಲ್​ಫೋನ್​ಗಳಿಗೆ ಪ್ರವೇಶ ಪಡೆದು ಅದನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಬಹುದಾಗಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. ಇಂಥದ್ದೊಂದು ಆರೋಪವನ್ನು ವಾಟ್ಸ್​ಆ್ಯಪ್​ಗೆ ಬಹುದೊಡ್ಡ ಸ್ಪರ್ಧಿ ಆಗಿರುವ ಹಾಗೂ ಅಡ್ವಾನ್ಸ್ಡ್​ ಫೀಚರ್ಸ್​ಗಳಲ್ಲಿ ವಾಟ್ಸ್​​ಆ್ಯಪ್​ಗಿಂತ ಸಾಕಷ್ಟು ಮುಂದಿರುವ ಟೆಲಿಗ್ರಾಂ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್​ ಮಾಡಿದ್ದಾರೆ.

    ಇದನ್ನೂ ಓದಿ: ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಸಂಕಷ್ಟ; ಬಳಕೆದಾರರ ಎದುರು ಹೊಸ ಆಯ್ಕೆಯಾಗಿ ‘ಸಿಗ್ನಲ್’

    ವಾಟ್ಸ್​ಆ್ಯಪ್​​ನ ಎಷ್ಟೇ ಅಡ್ವಾನ್ಸ್ಡ್​ ವರ್ಷನ್ ಬಳಸಿದರೂ, ಲೇಟೆಸ್ಟ್​ ಅಪ್​ಡೇಟ್​ ಮಾಡಿಕೊಂಡಿದ್ದರೂ ಸುರಕ್ಷತೆ ವಿಷಯದಲ್ಲಿ ಅದು ಅಪಾಯಕಾರಿ. ಏಕೆಂದರೆ 2018, 2019, 2020ರಲ್ಲೂ ಇದೇ ಭದ್ರತಾ ದೋಷಗಳು ವಾಟ್ಸ್​ಆ್ಯಪ್​​ನಲ್ಲಿ ಕಂಡುಬಂದಿದ್ದವು. 2017ರಲ್ಲೂ ಈ ಲೋಪ ಬೆಳಕಿಗೆ ಬಂದಿದ್ದು, 2016ರ ಮೊದಲು ವಾಟ್ಸ್​ಆ್ಯಪ್​​ನಲ್ಲಿ ಎನ್​ಕ್ರಿಪ್ಷನ್​ ಇರಲಿಲ್ಲ ಎಂದು ಪಾವೆಲ್ ಹೇಳಿದ್ದಾರೆ.

    ಇದನ್ನೂ ಓದಿ: ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

    ಪ್ರತಿ ವರ್ಷ ವಾಟ್ಸ್​ಆ್ಯಪ್​ನಲ್ಲಿ ಏನಾದರೊಂದು ಅಪಾಯ ಬೆಳಕಿಗೆ ಬರುತ್ತಿದ್ದು, ಅದರಿಂದ ಬಳಕೆದಾರರ ಉಪಕರಣಗಳಿಗೆ ಅಪಾಯ ಇರುವುದು ಬಹಿರಂಗವಾಗುತ್ತಿದೆ. ಅವರು ಎಷ್ಟೇ ಬಗೆಹರಿಸಿದರೂ ಸುರಕ್ಷತೆಯ ಲೋಪ ಅದರಲ್ಲಿ ಮುಂದುವರಿದಿದೆ. ಹೀಗಾಗಿ ನಾನು ಕೆಲವು ವರ್ಷಗಳ ಹಿಂದೆಯೇ ವಾಟ್ಸ್​​ಆ್ಯಪ್ ಡಿಲೀಟ್ ಮಾಡಿದ್ದೇನೆ. ಏಕೆಂದರೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮ ಪೋನ್​ಗೆ ಬಾಗಿಲು ಅಳವಡಿಸಿದಂತೆ ಎಂಬುದಾಗಿ ಅವರು ಆರೋಪಿಸಿದ್ದಾರೆ.

    ಪಾವೆಲ್​ ಡುರೊವ್​ ಹೇಳಿಕೆ: https://t.me/PavelDurovs/153

    ಕಳೆದ 13 ವರ್ಷಗಳಿಂದ ವಾಟ್ಸ್​ಆ್ಯಪ್​ ನಿಗಾ ಇಡುವ ಉಪಕರಣವಾಗಿ ಬಳಕೆಯಾಗುತ್ತಿದೆ ಎಂದಿರುವ ಪಾವೆಲ್, ಜನರು ಟೆಲಿಗ್ರಾಂ ಬಳಸಲಿ ಎಂಬ ಕಾರಣಕ್ಕೆ ನಾನು ಇದನ್ನು ಹೇಳುತ್ತಿಲ್ಲ. ಟೆಲಿಗ್ರಾಮ್​ಗೆ ಈಗಾಗಲೇ 70 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ, ಪ್ರತಿ ದಿನ 20 ಲಕ್ಷಕ್ಕೂ ಅಧಿಕ ಮಂದಿ ಟೆಲಿಗ್ರಾಮ್​​ಗೆ ಸೈನ್​ಅಪ್​ ಆಗುತ್ತಿದ್ದಾರೆ. ಟೆಲಿಗ್ರಾಮ್​ಗೆ ಹೆಚ್ಚುವರಿ ಪ್ರಚಾರ ಬೇಕಾಗಿಲ್ಲ. ನೀವು ನಿಮ್ಮ ಇಷ್ಟದ ಯಾವುದೇ ಮೆಸೇಜಿಂಗ್ ಆ್ಯಪ್​ ಬಳಸಬಹುದು, ಆದರೆ ವಾಟ್ಸ್​ಆ್ಯಪ್​ನಿಂದ ದೂರವಿರಿ ಎಂದು ಪಾವೆಲ್ ಹೇಳಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್​ ಕೂಡ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

    ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts