

ಬೆಂಗಳೂರು: ಮೆಸೇಜಿಂಗ್ ಆ್ಯಪ್ನ ಫೀಚರ್ಗಳಲ್ಲಿ ಬಹಳಷ್ಟು ಅಡ್ವಾನ್ಸ್ಡ್ ಆಗಿರುವ ಟೆಲಿಗ್ರಾಂ ಆ್ಯಪ್ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಒಂದೊಂದೇ ಅಪ್ಡೇಟ್ಗಳನ್ನು ನೀಡುತ್ತಿರುವ ವಾಟ್ಸ್ಆ್ಯಪ್ ಇದೀಗ ಮತ್ತೊಂದು ಅಪ್ಡೇಟ್ ಕೊಟ್ಟಿದೆ.
ಟೆಲಿಗ್ರಾಂ ಆ್ಯಪ್ನಲ್ಲಿ ಹೆಚ್ಚಿನ ಫೈಲ್ ಟ್ರಾನ್ಸ್ಫರ್ಗೆ ಅವಕಾಶ ಇರುವಂತೆ ಅದೇ ದಾರಿಯಲ್ಲಿ ಸಾಗಿದ ವಾಟ್ಸ್ಆ್ಯಪ್ 2 ಜಿಬಿ ಫೈಲ್ ಶೇರಿಂಗ್ ಅವಕಾಶ ನೀಡಿತ್ತು. ಟೆಲಿಗ್ರಾಮ್ನಲ್ಲಿರುವ ಮತ್ತೊಂದು ಆಪ್ಷನ್ ಎಂದರೆ ಮೆಸೇಜ್ಗಳಿಗೆ ರಿಯಾಕ್ಷನ್. ಅದನ್ನೂ ವಾಟ್ಸ್ಆ್ಯಪ್ ಇತ್ತೀಚೆಗೆ ನೀಡಿದೆ.
ಇದೀಗ ಅದು ತನ್ನ ಗ್ರೂಪ್ ಮೆಂಬರ್ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ವಾಟ್ಸ್ಆ್ಯಪ್ನಲ್ಲಿ ಗ್ರೂಪ್ ಗರಿಷ್ಠ ಮಿತಿ 256 ಇದ್ದು, ಅದನ್ನು ಈಗ ದುಪ್ಪಟ್ಟು ಮಾಡಲಾಗಿದೆ. ಅಂದರೆ ಇನ್ನುಮುಂದೆ ವಾಟ್ಸ್ಆ್ಯಪ್ನಲ್ಲಿ 512 ನಂಬರ್ಗಳನ್ನು ಗ್ರೂಪ್ನಲ್ಲಿ ಸೇರಿಸಬಹುದಾಗಿದೆ.
ಇದು ಬೀಟಾ ಯೂಸರ್ಗಳಿಗೆ ಬಹುತೇಕ ಈಗಾಗಲೇ ಸಿಗಲಾರಂಭಿಸಿದ್ದು, ಉಳಿದವರಿಗೆ ಸದ್ಯದಲ್ಲೇ ಲಭ್ಯವಾಗಲಿದೆ. ಟೆಲಿಗ್ರಾಂ ಆ್ಯಪ್ನಲ್ಲಿ ಈ ಸಾಮರ್ಥ್ಯ 2 ಲಕ್ಷ ಇದ್ದರೂ ಸದ್ಯದ ಅಪ್ಡೇಟ್ನಿಂದ ವಾಟ್ಸ್ಆ್ಯಪ್ ಬಳಕೆದಾರರು ಒಂದಷ್ಟು ಖುಷಿಯಾಗಿರುವುದಂತೂ ನಿಜ.