ಹೈದರಾಬಾದ್: ಟಾಲಿವುಡ್ ಸ್ಟಾರ್ ಹೀರೋ ಅಕ್ಕಿನೇನಿ ನಾಗಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಗೆಳತಿ ಹಾಗೂ ನಟಿ ಶೋಭಿತಾ ಧೂಳಿಪಾಲ ಜತೆ ನಾಗಚೈತನ್ಯ ಗುರುವಾರ (ಆ.08) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಇಷ್ಟು ದಿನ ಕೇವಲ ವದಂತಿಯಾಗಿತ್ತು. ಆದರೆ, ಈಗ ವದಂತಿ ನಿಜವಾಗಿದೆ.
ನಾಗಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕಿನೇನಿ ನಾಗಾರ್ಜುನ ಅವರು ಅಧಿಕೃತವಾಗಿ ಆ.8ರಂದು ಘೋಷಣೆ ಮಾಡಿದರು. ಸಮಾರಂಭದ ವೇಳೆ ಚೈತನ್ಯ ಅವರು ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದರೆ, ಶೋಭಿತಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಅತ್ಯಂತ ಸರಳವಾಗಿ ಈ ನಿಶ್ಚಿತಾರ್ಥ ಸಮಾರಂಭ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಅಂದಹಾಗೆ ನಾಗಚೈತನ್ಯ ಅವರು ಈ ಹಿಂದೆ ನಟಿ ಸಮಂತಾರನ್ನು ಪ್ರೀತಿಸಿ ವಿವಾಹವಾಗಿದ್ದರು. 2017 ರಲ್ಲಿ ಮದುವೆಯಾಗಿ 2021 ರಲ್ಲಿ ಇಬ್ಬರು ಭಿನ್ನಾಭಿಪ್ರಾಯಗಳ ಕಾರಣದಿಂದ ಬೇರ್ಪಟ್ಟರು. ಇದು ಕೂಡ ಭಾರಿ ಸುದ್ದಿಯಾಗಿತ್ತು. ಇದೀಗ ನಾಗಚೈತನ್ಯ ಮತ್ತೊಂದು ಮದುವೆಗೆ ತಯಾರಿ ಮಾಡಿಕೊಂಡಿದ್ದು, ಅವರ ಭಾವಿ ಪತ್ನಿಯ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. ಇದೀಗ ನಾಗಚೈತನ್ಯ ತಂದೆ ನಟ ನಾಗಾರ್ಜುನ ಅವರು 6 ವರ್ಷದ ಹಿಂದೆ ಶೋಭಿತಾ ಬಗ್ಗೆ ನೀಡಿದ್ದ ಬೋಲ್ಡ್ ಹೇಳಿಕೆಯ ವಿಡಿಯೋ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.
2018ರಲ್ಲಿ ತೆರೆಕಂಡ ತೆಲುಗಿನ ‘ಗೂಡಾಚಾರಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಾಗರಾರ್ಜುನ ಅವರು ಶೋಭಿತಾ ಅವರನ್ನು ತುಂಬಾ ಹೊಗಳಿದ್ದರು. ಶೋಭಿತಾ ಒಳ್ಳೆಯವಳು. ಆದರೆ, ನಾನಿದ್ದನ್ನು ಹೇಳಬಹುದೇ ಎಂದು ನನಗೆ ತಿಳಿದಿಲ್ಲ ಆದರೂ ಹೇಳುತ್ತೇನೆ. ಈ ಸಿನಿಮಾದಲ್ಲಿ ಶೋಭಿತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣುತ್ತಾರೆ ಮತ್ತು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ನಾಗಾರ್ಜುನ ಅವರು ಹೊಗಳಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ.
Nagarjuna hmm…. pic.twitter.com/CTbKQM9811
— sunny 🚁 (@SrrrH_Fans) August 8, 2024
ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ನಾಗಾರ್ಜುನ ಅವರು ತಮ್ಮ ಪುತ್ರ ಚೈತನ್ಯ ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ಮಾತನಾಡಿದ್ದರು. ಸಮಂತಾರಿಂದ ದೂರಾದ ಬಳಿಕ ನಾಗಚೈತನ್ಯ ಖಿನ್ನತೆ ಜಾರಿ ತುಂಬಾ ಒದ್ದಾಡಿದ್ದರು. ಆದರೆ, ಈಗ ಅದರಿಂದ ಹೊರಬಂದಿದ್ದು, ಶೋಭಿತಾ ಪರಿಚಯವಾದ ಬಳಿಕ ಮತ್ತೆ ಸಂತೋಷವಾಗಿದ್ದಾನೆ ಎಂದು ನಾಗಾರ್ಜುನ ಹೇಳಿದ್ದರು.
ಅಂದಹಾಗೆ ಸುದೀರ್ಘ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾದರು.
ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ನಟಿ ಶೋಭಿತಾ ಅವರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರೂ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದೀಗ ತಮ್ಮ ಸಂಬಂಧಕ್ಕೆ ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. (ಏಜೆನ್ಸೀಸ್)
ಪ್ಲೀಸ್ ನನ್ನನ್ನು ಮದ್ವೆಯಾಗಿ! ಕಾಲಿಗೆ ಬಿದ್ದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರ ವೈರಲ್
ಶೋಭಿತಾ ಧೂಳಿಪಾಲ ಸಮಂತಾರ ಸಹೋದರಿ! ಅಚ್ಚರಿ ಮಾಹಿತಿ ಬಯಲು, ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್…
ಮದುವೆಗೂ ಮುನ್ನ ತಾಯಿಯಾದ ಮೃನಾಲ್ ಠಾಕೂರ್! 8 ವರ್ಷದ ಹೆಣ್ಣು ಮಗಳಿನ ಅಮ್ಮ ಸೀತಾಮಹಾಲಕ್ಷ್ಮೀ