ನವದೆಹಲಿ. ಸಿನಿ ಇಂಡಸ್ಟ್ರಿಯಲ್ಲಿ ಮದುವೆಗೂ ಮುನ್ನವೇ ತಾಯಂದಿರಾದ ಕೆಲ ನಟಿಯರಿದ್ದಾರೆ. ಇಲಿಯಾನಾ ಹಾಗೂ ನತಾಶಾ ಸ್ಟಾಂಕೋವಿಕ್ ತಾಜಾ ಉದಾಹರಣೆ ಎಂದು ಹೇಳಬಹುದು. ಮದುವೆಗೂ ಮುನ್ನವೇ ತಾಯಿಯಾದ ಸಂಗತಿಯನ್ನು ಜಗತ್ತಿನ ಮುಂದೆ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಆ ಸಾಲಿಗೆ ಇದೀಗ ಮೃನಾಲ್ ಠಾಕೂರ್ ಕೂಡ ಸೇರಿದ್ದಾರೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಅದು ಏನು ಅಂತಾ ನಾವೀಗ ನಿಮಗೆ ತಿಳಿಸುತ್ತೇವೆ.
32 ವರ್ಷದ ನಟಿ ಮೃನಾಲ್ ಠಾಕೂರ್ ಇನ್ನೂ ಮದುವೆಯಾಗಿಲ್ಲ. ಆದರೆ, ಹೆಣ್ಣು ಮಗಳ ತಾಯಿಯಾಗಿದ್ದಾಳೆ. ಇದು ವಿಚಿತ್ರ ಎನಿಸಿದರೂ ಆಕೆ 8 ವರ್ಷದ ಬಾಲಕಿಗೆ ತಾಯಿಯಾಗಿರುವುದು ನಿಜ. ಸ್ವತಃ ಇದನ್ನು ಮೃನಾಲ್ ಅವರೇ ಒಪ್ಪಿಕೊಂಡಿದ್ದಾರೆ. ನನ್ನ ಹೊಟ್ಟೆಯಲ್ಲಿ ಹುಟ್ಟುವ ಮಗು ನನಗೆ ಎರಡನೇ ಮಗು. ಈಕೆಯೇ ನನ್ನ ಮೊದಲ ಮಗು ಎಂದು ಸಂದರ್ಶನವೊಂದರಲ್ಲಿ ಮೃನಾಲ್ ಹೇಳಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ.
ಅಂದಹಾಗೆ ಮೃನಾಲ್ ಠಾಕೂರ್ ಅವರ ಹೆಸರು ಕುಶಾಲ್ ಟಂಡನ್, ಗಾಯಕ ಬಾದ್‌ಶಾ, ಸಿದ್ಧಾಂತ್ ಚತುರ್ವೇದಿ ಅವರಂತಹ ನಟರೊಂದಿಗೆ ಕೇಳಿಬಂದಿತ್ತು. ಡೇಟಿಂಗ್ ವದಂತಿಗಳು ಹಬ್ಬಿತ್ತು. ಅಲ್ಲದೆ, ನಾನು ವಿರಾಟ್ ಕೊಹ್ಲಿ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದೆ ಎಂದು ಹಿಂದೊಮ್ಮೆ ಹೇಳಿದ್ದ ಮಾತು ಕೂಡ ಇತ್ತೀಚೆಗೆ ಮತ್ತೆ ವೈರಲ್ ಆಗಿತ್ತು. ಇಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮನವಿ ಸಹ ಮಾಡಿದ್ದರು. ಈ ಎಲ್ಲ ವರದಿಗಳ ನಡುವೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಮೃನಾಲ್ ಪುಟ್ಟ ಹುಡುಗಿಯನ್ನು ನನ್ನ ಮೊದಲ ಮಗು ಎಂದು ಹೇಳಿದ್ದಾರೆ.
ಆಕೆ ನನ್ನ ಮೊದಲು ಮಗು. ನನ್ನ ಹೊಟ್ಟೆಯಲ್ಲಿ ಯಾವಾಗಲಾದರೂ ಮಗು ಜನಿಸಲಿ ಅದು ಎರಡನೇ ಮಗು ಆಗಿರಲಿದೆ. ಏಕೆಂದರೆ, ಆಕೆ ನನ್ನ ಮೊದಲ ಮಗು. ಅಂತಹ ಬಂಧ ನಮ್ಮಿಬ್ಬರ ನಡುವೆ ಬೆಳೆದಿದೆ. ಆಕೆ ನನ್ನನ್ನು ಯಷ್ಣಾ ಅಥವಾ Mmmm ಎಂದು ಕರೆಯುತ್ತಾಳೆ. ಅವಳು ತುಂಬಾ ಒಳ್ಳೆಯವಳು. ಆಕೆ ತನ್ನ ಕಣ್ಣುಗಳಿಂದಲೇ ಮಾತನಾಡುತ್ತಾಳೆ. ಅವಳಿಂದ ಕಲಿಯುವುದು ತುಂಬಾ ಇದೆ. ಅವಳು ನನಗೂ ಕಲಿಸಿದ್ದಾಳೆ. ಆದರೆ, ಅದು ಮುಗ್ಧ ಮಗುವಿಗೆ ತಿಳಿದಿಲ್ಲ ಎಂದು ವೈರಲ್ ವಿಡಿಯೋದಲ್ಲಿ ಮೃನಾಲ್ ಹೇಳಿದ್ದಾರೆ.
ಮೃನಾಲ್ ಅವರ ಮೊದಲ ಮಗು ಯಾರು?
ಇಷ್ಟೆಲ್ಲ ಕೇಳಿದ ಮೇಲೆ ಮೃನಾಲ್ ಏನಾದರೂ ಮಗುವನ್ನು ದತ್ತು ಪಡೆದುಕೊಂಡಿದ್ದಾರಾ ಎಂದು ನಿಮಗೆ ಅನಿಸಬಹುದು. ಆದರೆ, ಮೃನಾಲ್ ಯಾವುದೇ ಮಗುವನ್ನು ದತ್ತು ಪಡೆದಿಲ್ಲ ಮತ್ತು ಜನ್ಮವೂ ನೀಡಿಲ್ಲ. ಆಕೆಯ ಮೊದಲ ಮಗು ಬೇರೆ ಯಾರೂ ಅಲ್ಲ ಆಕೆ ಬಾಲನಟಿ ಕಿಯಾರಾ ಖನ್ನಾ. ಮೃನಾಲ್ ಅವರು ಟಾಲಿವುಡ್ ಸ್ಟಾರ್ ನಾನಿ ಅವರ ‘ಹಾಯ್ ನನ್ನ’ ಚಿತ್ರದಲ್ಲಿ ಕಿಯಾರಾ ಜೊತೆ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ, ಮೃಲ್ ‘ಯಷ್ಣಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಕಿಯಾರಾ ‘ಮಹಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾಳ ತಾಯಿಯಾಗಿ ಈ ಚಿತ್ರದಲ್ಲಿ ಮೃನಾಲ್ ನಟಿಸಿದ್ದಾರೆ.
ಹಾಯ್ ನಾನ್ನಾ ಸಿನಿಮಾ ತೆಲುಗಿನಲ್ಲಿ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರದ ಶೂಟಿಂಗ್ ವೇಳೆ ಕಿಯಾರಾ ಜತೆಗೆ ಬೆಸೆದ ಸಂಬಂಧದ ಬಗ್ಗೆ ಮೃನಾಲ್ ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದರು. ನನಗೆ ಮಗು ಹುಟ್ಟಿದರೂ ಕಿಯಾರಾಳೇ ನನ್ನ ಮೊದಲ ಮಗಳು ಎಂದು ಮೃನಾಲ್ ಹೇಳಿದ್ದಾರೆ. ಈ ವೈರಲ್ ವಿಡಿಯೋವನ್ನು ಕಿಯಾರಾಳೇ ಹಂಚಿಕೊಂಡಿದ್ದಾಳೆ. ಇದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಲ್ಲದೆ, ಮೃನಾಲ್ ಕೂಡ ಹೃದಯದ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ಹೊಂದಿದ್ದಕ್ಕಾಗಿ ಕೃತಜ್ಞತೆಗಳು. ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಮತ್ತು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ನನ್ನನ್ನು ಭೇಟಿ ಮಾಡಿ ಎಂದು ಕಿಯಾರಾ ಮೃನಾಲ್ ಅವರನ್ನು ಕೇಳಿಕೊಂಡಿದ್ದರು. ಸದ್ಯ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. (ಏಜೆನ್ಸೀಸ್)
ಶೋಭಿತಾ ಧೂಳಿಪಾಲ ಸಮಂತಾರ ಸಹೋದರಿ! ಅಚ್ಚರಿ ಮಾಹಿತಿ ಬಯಲು, ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್…
ಡೇಂಜರ್ ಝೋನ್ನಲ್ಲಿದೆ ಈ ಸ್ಟಾರ್ ಕ್ರಿಕೆಟಿಗನ ಕೆರಿಯರ್! ಗಂಭೀರ್ ಕೂಡ ಕಾಪಾಡಲು ಸಾಧ್ಯವಿಲ್ಲ