ಸಿನಿಮಾ

ನಿದ್ದೆ ಮಾಡಲು ಕಷ್ಟ ಪಡುತ್ತಿದ್ದೀರಾ? ನಿದ್ರಾಹೀನತೆ ದೂರ ಮಾಡಲು ಇಲ್ಲಿವೆ 6 ಉಪಾಯಗಳು…!

ಬೆಂಗಳೂರು: ಇತ್ತೀಚೆಗೆ ನಿದ್ರಾಹೀನತೆ ಎಲ್ಲರಲ್ಲೂ ಕಾಡುತ್ತಿರುವ ಸಮಸ್ಯೆಯಾಗಿದೆ. ನಮ್ಮ ಜೀವನಶೈಲಿಯೇ ನಿದ್ರಾಹೀನತೆಗೆ ಮುಖ್ಯ ಕಾರಣ ಎಂದು ತಜ್ಱರು ತಿಳಿಸುತ್ತಾರೆ. ರಕ್ತದೊತ್ತಡ, ಸುಸ್ತು, ರಕ್ತದ ಮಟ್ಟದಲ್ಲಿ ಏರುಪೇರು ಮೊದಲಾದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ನಿದ್ರಾಹೀನತೆ ಕಾರಣವಾಗುತ್ತದೆ. ಒಳ್ಳೆಯ ಗುಣಮಟ್ಟದ ರಾತ್ರಿ ನಿದ್ದೆ ಇಲ್ಲದೆ ಹೋದರೆ ದಿನದ ಮೂಡ್​ ಹಾಳಾಗಿ ಹೋಗುತ್ತದೆ. ಪ್ರತಿಯೊಬ್ಬ ಮನುಷ್ಯ ಕೂಡ ಸರಿಯಾಗಿ ನಿದ್ದೆ ಮಾಡುವುದು ಅತ್ಯಗತ್ಯ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ದೂರಗೊಳಿಸಿ ಆರೋಗ್ಯಕರ ಜೀವನವನ್ನು ನಡೆಸಬಹುದು. ಅಂತಹ ಕೆಲವು ಬದಲಾವಣೆಗಳನ್ನು ಪಟ್ಟಿಯನ್ನು ಕೆಳಗೆ ತಿಳಿಸಿದೆ.

1) ವ್ಯಾಯಾಮ
ನಿದ್ರಾಹೀನತೆಗೆ ಸಾಮಾನ್ಯವಾದ ಮತ್ತು ಬಹಳ ಪರಿಣಾಮಕಾರಿಯಾದ ಉಪಾಯವಿದು. ದೇಹವನ್ನು ದಂಡಿಸಿದಾಗ ಸುಸ್ತಾಗಿ ನಿದ್ರೆಗೆ ಜಾರುತ್ತದೆ. ಇದರಿಂದ ಮಾಂಸಖಂಡ ಮತ್ತು ಮಾನಸಿಕ ಒತ್ತಡವನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ 6 ಹಂತದ ಬೆಳಗಿನ ದಿನಚರಿ

2) ಹೈಡ್ರೇಶನ್​​
ದೇಹದಲ್ಲಿ ನೀರಿನ ಮಟ್ಟ ಹೆಚ್ಚಿರಬೇಕು. ದಿನದಲ್ಲಿ ಸಾಕಷ್ಟು ಪಾನೀಯಗಳನ್ನು ಕುಡಿಯುವುದು ಅಗತ್ಯ. ಇದರಿಂದ ಆರೋಗ್ಯ ಕೂಡ ವೃದ್ದಿಯಾಗುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆ ಕೂಡ ದೂರಾಗುತ್ತದೆ.

3) ಸೂರ್ಯನ ಶಾಖ
ದಿನಕ್ಕೆ 15-20 ನಿಮಿಷ ಸೂರ್ಯನ ಕಿರಣ ದೇಹದ ಮೇಲೆ ಬೀಳಬೇಕು. ಬೆಳಗಿನ ಸೂರ್ಯನ ಶಾಖ ತಾಕಿದರೆ ಬಹಳ ಒಳ್ಳೆಯದು. ಸೂರ್ಯ ಕಿರಣ ನೈಸರ್ಗಿಕ ‘ವಿಟಮಿನ್​ ಡಿ’ಯ ಮೂಲವಾಗಿದೆ.

4) ಆಹಾರ ಅಭ್ಯಾಸಗಳು
ರಾತ್ರಿ ಮಲಗುವ ಮೊದಲು ಬಾಳೆಹಣ್ಣು, ಬಾದಾಮಿ, ಕುಂಬಳಖಾಯಿ ಬೀಜ ಮೊದಲಾದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯಕರ ನಿದ್ದೆಯನ್ನು ಮಾಡಬಹುದು.

5) ತಿನ್ನುವ ಸಮಯ
ರಾತ್ರಿ ಮಲಗುವ ಮೂರು ಗಂಟೆಯ ಮೊದಲು ಆಹಾರವನ್ನು ಸೇವಿಸಿದರೆ ಬಹಳ ಒಳ್ಳೆಯದು. ಇದರಿಂದ ನಿದ್ರಾಹೀನತೆ ದೂರವಾಗುತ್ತದೆ. ಅದರೊಂದಿಗೆ ಜೀರ್ಣಕ್ರಿಯೆ ಕೂಡ ಹೆಚ್ಚಾಗುತ್ತದೆ.

6) ಮೊಬೈಲ್​ ಬಳಕೆ
ರಾತ್ರಿ ಮಲಗುವ 30 ನಿಮಿಷಗಳ ಮುಂಚೆ ಮೊಬೈಲ್​, ಟಿವಿ, ಕಂಪ್ಯೂಟರ್​ ಸ್ಕ್ರೀನ್​ಗಳಿಂದ ದೂರವಿರಬೇಕು. ಅವುಗಲ ಕಿರಣವು ಮೆದುಳಿಗೆ ಹೆಚ್ಚು ಕೆಲಸ ಮಾಡಲು ಪ್ರೇರೆಪಿಸುತ್ತದೆ. ಆದ್ದರಿಮದ ಅದನ್ನು ದೂರವಿಡುವುದು ಬಹಳ ಅವಶ್ಯಕ. (ಏಜೆನ್ಸೀಸ್​)

 

Latest Posts

ಲೈಫ್‌ಸ್ಟೈಲ್