ಶ್ರುತಿ ಹಾಸನ್ ಹುಟ್ಟು ಹಬ್ಬಕ್ಕೆ ‘ಸಲಾರ್’ ಸ್ಪೆಷಲ್ ಪೋಸ್ಟರ್ ರಿಲೀಸ್! ಫೋಟೋ ವೈರಲ್...

Published on
ನಟಿ ಶ್ರುತಿ ಹಾಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ನಟ ಪ್ರಭಾಸ್ ಗೆ ಜೋಡಿಯಾಗಿ ನಟಿಸಲಿದ್ದಾರೆ. ಹಾಗಾಗಿ, ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಸಲಾರ್’ ಚಿತ್ರದಲ್ಲಿ ಶ್ರುತಿ ಅವರನ್ನು ಪ್ರಭಾಸ್ ಜತೆಗೆ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಈ ಸಿನಿಮಾ ಒಂದು ಆಕ್ಷನ್ ಡ್ರಾಮಾ ಎನ್ನಲಾಗಿದೆ. 
ಇನ್ನು, ನಟಿ ಶ್ರುತಿ ಹಾಸನ್ ಇಂದು (ಜನವರಿ 28) ತಮ್ಮ 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಲವು ಸಿನಿತಾರೆಯರು ಶ್ರುತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭವಾಗಿ, ನಿರ್ಮಾಪಕರು ‘ಸಲಾರ್’ ಚಿತ್ರದಲ್ಲಿನ ನಟಿಯ ಮೊದಲ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ನಟಿ ಶ್ರುತಿ ಈ ಸಿನಿಮಾದಲ್ಲಿ 'ಆದ್ಯ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.
ಜತೆಗೆ, ಫಸ್ಟ್ ಲುಕ್ ನಲ್ಲಿ ಶ್ರುತಿ ಚಿಂತನಶೀಲ ಮೂಡ್ ನಲ್ಲಿರುವ ಹಾಗೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ‘ಸಲಾರ್’ ಚಿತ್ರ ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿದೆ. ‘ಕೆಜಿಎಫ್’ ಸಿನಿಮಾದ ಪ್ರಮುಖ ತಾಂತ್ರಿಕ ತಂಡ ಈ ಸಿನಿಮಾಗೆ ಕೆಲಸ ಮಾಡುತ್ತಿರುವುದು ವಿಶೇಷ ಎಂದೇ ಹೇಳಬೇಕು. 'ಸಲಾರ್' ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net