ಜತೆಗೆ, ಈ ಬಗ್ಗೆ ನಟಿ ನಮಿತಾ ಕೂಡ, "ನನಗೆ ಶರತ್ ಬಾಬು ಯಾರು ಅಂತಲೇ ಗೊತ್ತಿಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಹೇಗೆ ಬಿತ್ತರವಾಯಿತು ಎನ್ನುವ ಬಗ್ಗೆಯೂ ಗೊತ್ತಿಲ್ಲ. ಇದೊಂದು ಸಂಪೂರ್ಣ ಸುಳ್ಳುಸುದ್ದಿ. ನನಗಿಂತ ವಯಸ್ಸಿನಲ್ಲಿ ದುಪ್ಪಟ್ಟು ದೊಡ್ಡವರಾದ ವ್ಯಕ್ತಿಯನ್ನು ನಾನು ಹೇಗೆ ಮದುವೆ ಆಗುತ್ತೀನಿ?", ಎಂದು ಹೇಳಿದ್ದಾರೆ. ಹೀಗಾಗಿ ನಮಿತಾ, ಪತಿ ವಿರೇಂದ್ರ ಚೌಧರಿ ಇದು ಸುಳ್ಳು ಸುದ್ದಿ ಎಂದಿದ್ದಾರೆ. ಈ ಬಗ್ಗೆ ನಮಿತಾ ಈ ಹಿಂದೆಯೇ ಮಾತನಾಡಿದ್ದಾರೆ. ಆದರೂ ಕೂಡ ಈ ಸುದ್ದಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ.