More

    ಡ್ಯಾನ್ಸ್​ ಮಾಡುವಾಗ ವೇದಿಕೆ ಮೇಲೆಯೇ ಕುಸಿದು ಬಿದ್ದು ಪ್ರಾಣಬಿಟ್ಟ ನಿವೃತ್ತ ಯೋಧ; ಹೃದಯ ವಿದ್ರಾವಕ ವಿಡಿಯೋ ವೈರಲ್

    ಇಂದೋರ್: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಜನರನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರು ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ನಿವೃತ್ತ ಸೈನಿಕರೊಬ್ಬರು ವೇದಿಕೆ ಮೇಲೆ ಡ್ಯಾನ್ಸ್​​ ಮಾಡುವಾದ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಮಕ್ಕಳು ಇವರು ನೃತ್ಯ ಮಾಡುತ್ತಿದ್ದಾರೆ ಎಂದು ಭಾವಿಸಿ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಘಳಲ್ಲಿ ವೈರಲ್​ ಆಗಿದೆ.

    ಮಧ್ಯಪ್ರದೇಶದ ಇಂದೋರ್​ನ ಶಾಲೆ ಒಂದರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ನಿವೃತ್ತ ಯೋಧ ಬಲ್ವಿಂದರ್​ ಸಿಂಗ್ ಛಾಬ್ರಾ​ ಎಂದು ಗುರುತಿಸಲಾಗಿದೆ. ಇವರಿಗೆ 2008ರಲ್ಲಿ ಬೈಪಾಸ್​ ಸರ್ಜರಿ ಆಗಿತ್ತು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಈತ ಟೀಮ್​ ಇಂಡಿಯಾದ ಕ್ರಿಸ್​ ಗೇಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ; ಮಾಜಿ ಕ್ರಿಕೆಟಿಗನ ಹೇಳಿಕೆ ವೈರಲ್

    ನಿವೃತ್ತಿಯ ಬಳಿಕ ಬಲ್ವಿಂದರ್​ ಸಿಂಗ್​ ಛಾಬ್ರಾ ಅವರು ಶಾಲೆ ಹಾಗೂ ಕಾಲೇಜುಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಅದೇ ರೀತಿ ಶುಕ್ರವಾರ (ಮೇ 31) ಇಂದೋರ್​ನಲ್ಲಿರುವ ಪ್ರತಿಷ್ಠಿತ ಶಾಲೆ ಒಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದಿದ್ದಾರೆ. ಇದನ್ನೂ ನೋಡಿದ ವಿದ್ಯಾರ್ಥಿಗಳು ಡ್ಯಾನ್ಸ್​ ಮಾಡುತ್ತಿದ್ದಾರೆ ಎಂದು ಭಾವಿಸಿ ಚಪ್ಪಾಳೆ ತಟ್ಟಲು ಶುರು ಮಾಡಿದ್ದಾರೆ. ಬಳಿಕ ಪರಿಶೀಲಿಸಿದಾಗ ಅವರು ಪ್ರಜ್ಞೆ ಕಳೆದುಕೊಂಡಿರುವುದನ್ನು ಶಾಲೆಯ ಸಿಬ್ಬಂದಿ ಗಮನಿಸಿದ್ದಾರೆ

    See also  ಮನೆಯ ಗೋಡೆ ಕುಸಿತ : ಬಡ ಕುಟುಂಬದ ಸ್ಥಿತಿ ಅತಂತ್ರ

    ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಬಲ್ವಿಂದರ್​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ವಿಚಾರವನ್ನು ಶಾಲೆಯ ಸಿಬ್ಬಂದಿ ಕೂಡಲೇ ಅವರ ಕುಟುಂಬಸ್ಥರಿಗೆ ತಿಳಿಸಿದ್ದು, ಕುಟುಂಬದ ಸದಸ್ಯರು ಅವರ ಅಂಗಾಂಗ ಹಾಗೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಲ್ವಿಂದರ್​ ಅವರ ನೃತ್ಯದ ವಿಡಿಯೋ ನೋಡಿ ಹಲವರು ಸಂತಾಪ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts