ಹೊಸ ಪಿಚ್​, ಹೊಸ ವಾತಾವರಣ; ಅಮೆರಿಕ ಸ್ಟೇಡಿಯಂ ಬಗ್ಗೆ ಮೊದಲ ಅಭಿಪ್ರಾಯ ತಿಳಿಸಿದ ಹಿಟ್​ಮ್ಯಾನ್​

Rohit Sharma
Published on

ಯುಎಸ್​ಎ:​ ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ಗೆ ವರ್ಣರಂಜಿತ ತೆರೆಬಿದ್ದಿದ್ದು, ಐಪಿಎಲ್​ನಲ್ಲಿ ಭಾಗಿಯಾಗಿದ್ದ ಆಟಗಾರರು ಜೂನ್​ 02 ಆರಂಭವಾಗಲಿರುವ ಚುಟುಕು ವಿಶ್ವ ಸಮರಕ್ಕೆ ತಯಾರಿ ನಡೆಸುತ್ತಿದ್ದಾರೆ.ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಶುರುವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ 20 ತಂಡಗಳು ಕಣಕ್ಕಿಳಿಯಲಿರುವುದು ವಿಶೇಷ. ಹೀಗಾಗಿ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.

ಟಿ-20 ವಿಶ್ವಕಪ್​ ಆಯೋಜನೆಗಾಗಿ ಯುಎಸ್​ಎನಲ್ಲಿ ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಮಾತನಾಡಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​​ ಶರ್ಮಾ ಅಲ್ಲಿನ ವಾತಾವರಣ ಹಾಗೂ ಪಿಚ್​ ಕುರಿತಾಗಿ ಮಾತನಾಡಿದ್ದಾರೆ.

ಟಿ-20 ವಿಶ್ವಕಪ್​ನಲ್ಲಿ ಆಡಲು ಉತ್ಸುಕನಾಗಿದ್ದು, ಆದಷ್ಟು ಬೇಗನೇ ಪರಿಸ್ಥಿತಿಗೆ ಹೊಂದಿಕೊಳ್ಳಲು ಎದುರು ನೋಡುತ್ತಿದ್ದೇನೆ. ಮೊದಲಿಗೆ ನಾವು ಇಲ್ಲಿನ ಪಿಚ್ ಅನ್ನು ಅರ್ಥಮಾಡಿಕೊಳ್ಳಬೇಕಿದೆ. ಪಿಚ್ ವರ್ತನೆ ಹೇಗಿದೆ ಎಂಬುದು ತಿಳಿದುಕೊಳ್ಳಬೇಕಿದೆ. ಆದಷ್ಟು ಬೇಗನೇ ಲಯ ಕಂಡುಕೊಳ್ಳುವುದು ಮುಖ್ಯವೆನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ವಾತಾವರಣ ಚೆನ್ನಾಗಿದೆ. ತೆರೆದ ಮೈದಾನ ಇದಾಗಿದೆ. ಅಭಿಮಾನಿಗಳ ಮುಂದೆ ಆಡಲು ಕಾತುರರಾಗಿದ್ದು, ವಿಶ್ವಕಪ್ ವೀಕ್ಷಿಸಲು ನ್ಯೂಯಾರ್ಕ್‌ನ ಜನರು ಉತ್ಸುಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಲ್ಲಿ ವಿಶ್ವಕಪ್ ಆಯೋಜನೆಯಾಗುತ್ತಿದೆ. ಎಲ್ಲ ತಂಡಗಳಿಗೂ ಉತ್ತಮ ಬೆಂಬಲ ಸಿಗುವ ನಿರೀಕ್ಷೆಯಿದೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net