More

    ಈತ SSLC ಪರೀಕ್ಷೆ ಪಾಸ್​ ಮಾಡಿದ್ದೆ ರಣರೋಚಕ; ಡೋಲು ಬಾರಿಸಿ ಕುಣಿದು ಕುಪ್ಪಳಿಸಿದ ಗ್ರಾಮಸ್ಥರು

    ಬೀಡ್​: ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಈ ಮಾತನ್ನು ಯುವಕನೋರ್ವ ಅಕ್ಷರಶಃ ನಿಜ ಎಂದು ತೋರಿಸಿಕೊಟ್ಟಿದ್ದು, ಈತನ ಸಾಧನೆಗೆ ಮೆಚಚಿ ಇಡೀ ಊರಿಗೆ ಊರೇ ಸಂಭ್ರಮಿಸಿರುವ ಘಟನೆ ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಪರಲಿ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

    ಕೃಷ್ಣ ನಾಮ್​ದೇವ್ ಮುಂಡೆ ಎಂಬ ಹೆಸರಿನ ವ್ಯಕ್ತಿಯು 2018ರಲ್ಲಿ 10ನೇ ತರಗತಿ ಅನುತ್ತೀರ್ಣರಾಗಿದ್ದ. ಯುವಕ ಪ್ರತಿ ಬಾರಿಯೂ ಎಸ್​ಎಸ್​ಎಲ್​ಸಿ ಬೋರ್ಡ್​ ಪರೀಕ್ಷೆ ಬರೆದಾಗಲೂ ಅನುತ್ತೀರ್ಣನಾಗುತ್ತಿದ್ದ. ತಾಳ್ಮೆ ಕಳೆದುಕೊಳ್ಳದೆ, ಪರೀಕ್ಷೆಯಲ್ಲಿ ಪಾಸ್‌ ಆಗೇ ಆಗುತ್ತೇನೆ ಎಂದು ಛಲ ಬಿಡದೆ ಸತತವಾಗಿ ಪರೀಕ್ಷೆ ಬರೆದು ತನ್ನ  ಹನ್ನೊಂದನೇ ಪ್ರಯತ್ನದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಪಾಸ್​ ಮಾಡಿದ್ದಾನೆ. ಈತ ಪರಲಿ ತಾಲ್ಲೂಕಿನ ರತ್ನೇಶ್ವರ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಐಸಿಸಿ ಭಾರತದ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತದೆ; ಪಾಕ್​ ಮಾಜಿ ಆಟಗಾರನ ಆರೋಪ

    See also  ವೀರಯೋಧರಿಗಾಗಿ ಹೊರಬಂತು ಗುಂಡು ನಿರೋಧಕ ಹೆಲ್ಮೆಟ್; ಅಂದು ಬುಲೆಟ್​ ಪ್ರೂಫ್ ಜಾಕೆಟ್ ಕಂಡು ಹಿಡಿದಿದ್ದ ಮೇಜರ್​ ಅನೂಪ್​ ಮಿಶ್ರಾರಿಂದ ಮತ್ತೊಂದು ಸಾಧನೆ ​

    ಈತ ಪ್ರತಿ ಬಾರಿ ಪರೀಕ್ಷೆ ಬರೆದಾಗಲೂ ಫೇಲ್​ ಆಗುತ್ತಿದ್ದ. 10 ನೇ ಬಾರಿ ಬರೆದ ಪರೀಕ್ಷೆಯಲ್ಲಿ ಆತ ಇತಿಹಾಸ ವಿಷಯದಲ್ಲಿ ಫೇಲ್‌ ಆಗಿದ್ದ. ಆದರೆ 11 ನೇ ಪ್ರಯತ್ನದಲ್ಲಿ ಕೃಷ್ಣ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಗಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಕೃಷ್ಣನ ಈ ಯಶಸ್ಸನ್ನು ಆತನ ಕುಟುಂಬ ಮಾತ್ರವಲ್ಲದೇ ಇಡೀ ಗ್ರಾಮವೇ ಸಂಭ್ರಮಿಸಿದೆ. ಆತನ ತಂದೆ ಹಾಗೂ ಗ್ರಾಮಸ್ಥರು ಡೋಲು ಬಾರಿಸುತ್ತಾ ಕೃಷ್ಣನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಖುಷಿಯನ್ನು ಸಂಭ್ರಮಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಯುವಕನ ಪರಿಶ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಛಲ ಒಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈತನೇ ಜೀವಂತ ಉದಾಹರಣೆ ಎಂದು ಕಮೆಂಟ್​ ಮಾಡಿ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts