ಲಂಡನ್: ಟಿ-20 ವಿಶ್ವಸಮರ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಚುಟುಕು ವಿಶ್ವಸಮರ ಆರಂಭಕ್ಕೂ ಮುನ್ನ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಆಟಗಾರರು ಟಿ-20 ವಿಶ್ವಕಪ್ನಲ್ಲೂ ತಮ್ಮ ಕೈಚಳಕ ತೋರಲು ಸಜ್ಜಾಗಿದ್ದಾರೆ. ಇನ್ನೂ ವಿಶ್ವಕಪ್ ಸೇರಿದಂತೆ ಪ್ರತಿಷ್ಠಿತ ಟೂರ್ನಿಗಳು ಶುರುವಾಗುವುದಕ್ಕೂ ಮುನ್ನ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಾರೆ. ಅದೇ ರೀತಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮಾಂಟೆ ಪನೇಸರ್ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

ಈ ಕುರಿತು ಮಾತನಾಡಿರುವ ಮಾಂಟೆ ಪನೇಸರ್, ಶಿವಂ ದುವೆ ಟೀಮ್ ಇಂಡಿಯಾದ ಕ್ರಿಸ್ ಗೇಲ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆತ ಬಾಲ್ ಎದುರಿಸುವ ರೀತಿ ಮತ್ತು ಅದನ್ನು ಮೈದಾನದಿಂದ ಹೊರಗಟ್ಟುವುದನ್ನು ನೋಡಿದರೆ ಆತ ಟೀಮ್ ಇಂಡಿಯಾ ಪಾಲಿಗೆ ಕ್ರಿಸ್ ಗೇಲ್ ಆಗವುದು ಪಕ್ಕಾ. ಇನ್ ಫಾರ್ಮ್ ಆಲ್ರೌಂಡರ್ನನ್ನು ಸೆಲೆಕ್ಟ್ ಮಾಡುವ ಮೂಲಕ ಆಯ್ಕೆ ಸಮಿತಿ ಸದಸ್ಯರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ರಿಂಕು ಸಿಂಗ್ ಫಾರ್ಮ್ನಲ್ಲಿರದ ಕಾರಣ ಆಯ್ಕೆ ಸಮಿತಿಯವರು ಶಿವಂ ದುಬೆರನ್ನು ಸೆಲೆಕ್ಟ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೋಫ್ರಾ ಆರ್ಚರ್ ತಂಡಕ್ಕೆ ಮರಳಿರುವುದು ಇಂಗ್ಲೆಂಡ್ ಪಾಲಿಗೆ ದೊಡ್ಡ ಬೂಸ್ಟ್ ಸಿಕ್ಕಂತಾಗಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಈ ವರ್ಷ ಇಂಗ್ಲೆಂಡ್ ತಂಡದ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ವಿಶೇಷವಾಗಿ ಐಪಿಎಲ್ನಲ್ಲಿ ಅವರು ಆಡಿರುವ ರೀತಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಉತ್ತೇಜನವನ್ನು ನೀಡಿದೆ. ಆಟಗಾರರ ಫಾರ್ಮ್ ಗಮನಿಸಿದರೆ ಈ ಬಾರಿಯೂ ವಿಶ್ವಕಪ್ ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ ಎಂದು ಮಾಂಟೆ ಪನೇಸರ್ ಭವಿಷ್ಯ ನುಡಿದಿದ್ದಾರೆ.
Launched into the orbit! 🚀
— BCCI (@BCCI) January 11, 2024
Shivam Dube with a giant MAXIMUM in Mohali 💥
Follow the Match ▶️ https://t.co/BkCq71Zm6G#TeamIndia | #INDvAFG | @IDFCFIRSTBank | @IamShivamDube pic.twitter.com/HxYvyNTn8R