More

    ಮತ್ತೆ ಸಾಬೀತಾಯ್ತು ಸಾನಿಯಾ ಪವರ್!​ ಶೋಯಿಬ್​ ಪತ್ನಿ ಸನಾ​ಗೆ ಪಾಕ್​ ನೆಲದಲ್ಲೇ ಭಾರಿ ಮುಖಭಂಗ

    ಇಸ್ಲಮಾಬಾದ್​: ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟು ಪಾಕಿಸ್ತಾನ ನಟಿ ಸನಾ ಜಾವೇದ್​ ಅವರನ್ನು ಶೋಯಿಬ್​ ಮಲಿಕ್​ ಮದುವೆಯಾಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಶೋಯಿಬ್​ಗೆ 3ನೇ ಮದುವೆಯಾದರೆ, ಸನಾ ಜಾವೇದ್​ಗೆ ಇದು ಎರಡನೇ ಮದುವೆ. ಯಾವಾಗ ಇಬ್ಬರು ದಿಢೀರನೇ ಮದುವೆಯಾದರೋ ಪಾಕಿಸ್ತಾನದಲ್ಲೇ ಭಾರಿ ಆಕ್ರೋಶ ವ್ಯಕ್ತವಾಯಿತು ಮತ್ತು ಸಾನಿಯಾ ಪರ ಎಲ್ಲರ ಮಾತನಾಡಲು ಆರಂಭಿಸಿದರು. ಅದರಲ್ಲೂ ಪಾಕ್​ ಮಾಧ್ಯಮಗಳಂತೂ ಶೋಯಿಬ್​ರನ್ನು ಹೆಣ್ಣುಬಾಕ ಎಂದೇ ನಿಂದಿಸಿದವು.

    ತಾಜಾ ಸಂಗತಿ ಏನೆಂದರೆ, ಶೋಯಿಬ್​ ಮೂರನೇ ಮಡದಿ ಸನಾ ಜಾವೇದ್​ಗೆ ಪಾಕ್​ ನೆಲದಲ್ಲೇ ಭಾರಿ ಮುಖಭಂಗವಾಗಿದೆ. ಅಭಿಮಾನಿಗಳು ಸಾನಿಯಾ ಪರ ಘೋಷಣೆಗಳನ್ನು ಕೂಗಿ ಸನಾ ಜಾವೇದ್​ ಕಾಲೆಳೆದಿದ್ದಾರೆ.

    ವಿವರಣೆಗೆ ಬರುವುದಾದರೆ, ಪಾಕಿಸ್ತಾನದಲ್ಲಿ ಪಿಎಸ್​ಎಲ್​ (ಪಾಕಿಸ್ತಾನ ಸೂಪರ್​ ಲೀಗ್​) ಕ್ರಿಕೆಟ್​ ಟೂರ್ನಿ ನಡೆಯುತ್ತಿದೆ. ಫೆ.18ರ ಭಾನುವಾರದಂದು ಕರಾಚಿ ಕಿಂಗ್ಸ್​ ಮತ್ತು ಮುಲ್ತಾನ್​ ಸುಲ್ತಾನ್​​ ತಂಡಗಳ ನಡುವೆ ಮುಲ್ತಾನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ಪಂದ್ಯ ನಡೆಯಿತು. ಪಂದ್ಯ ಮುಗಿದ ಬಳಿಕ ಸನಾ ಜಾವೇದ್​, ಮೈದಾನದಿಂದ ಹೊರ ಹೋಗುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಶೋಯಿಬ್​ ಮಾಜಿ ಪತ್ನಿ ಸಾನಿಯಾ ಮಿರ್ಜಾ ಹೆಸರನ್ನು ಕೂಗಿ ಕೂಗಿ ಹೇಳಿದ್ದಾರೆ. ಇದನ್ನು ಕೇಳಿ ಸನಾ ಜಾವೇದ್, ಘೋಷಣೆ ಕೂಗುತ್ತಿದ್ದವರ ಕಡೆ ತಿರುಗಿ,​ ಕೋಪ ಮಾಡಿಕೊಂಡಂತೆ ಮುಖ ಮಾಡಿಕೊಂಡು ಅಲ್ಲಿಂದ ಹೊರ ನಡೆದಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. 2 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ಲೈಕ್​ ಮಾಡಿದ್ದಾರೆ.

    ಪಾಕ್​ ನೆಲದಲ್ಲೇ ಸನಾ ಜಾವೇದ್​ಗೆ ಭಾರಿ ಮುಖಭಂಗವಾಗಿದೆ. ಅಲ್ಲಿನ ಮಂದಿ ಸಾನಿಯಾ ಪರ ಬ್ಯಾಟ್​ ಬೀಸುತ್ತಿದ್ದು, ಮತ್ತೊಮ್ಮೆ ಸಾನಿಯಾ ಪವರ್​ ಏನೆಂಬುದು ಸಾಬೀತಾಗಿದೆ. ಸಾನಿಯಾ ವರ್ಚಸ್ಸಿನ ಮುಂದೆ ಶೋಯಿಬ್​ ಮತ್ತು ಸನಾ ವರ್ಚಸ್ಸು ಮುಂಕಾಗಿದೆ. ಇಬ್ಬರ ವಿರುದ್ಧ ಆಗಾಗ ಕೇಳಿಬರುವ ಟೀಕಾ ಪ್ರಹಾರವೇ ಇದಕ್ಕೆ ಉದಾಹರಣೆಯಾಗಿದೆ.

    ಅಂದಹಾಗೆ ಶೋಯಿಬ್​-ಸನಾ ಮದುವೆಗೆ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಪಾಕ್​ ಮೀಡಿಯಾಗಳು ಸಹ ಮಲಿಕ್​ ವಿರುದ್ಧವೇ ಆರೋಪಗಳ ಸುರಿಮಳೆಗೈದಿದ್ದವು. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್​ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ. ಹೆಣ್ಣಿನ ಮೇಲೆ ಮಲಿಕ್​ಗೆ ಇರುವ ಮೋಹದ ಮುಖವಾಡವನ್ನು ಸಹೋದರಿಯೇ ಮಾಧ್ಯಮಗಳ ಎದುರು ಕಳಚಿದ್ದಾರೆ. ಮಲಿಕ್​ ವಿವಾಹೇತರ ಸಂಬಂಧಗಳೇ ಸಾನಿಯಾ ಜತೆಗಿನ ವೈವಾಹಿಕ ಸಂಬಂಧ ಮುರಿದು ಬೀಳಲು ಕಾರಣ ಎಂದು ಸಹೋದರಿ ತಿಳಿಸಿದ್ದಾರೆ.

    ಡಿವೋರ್ಸ್​ ವಿಚಾರ ಶುರುವಾಗಿದ್ದು ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

    ಗಂಡ ಏಕೆ ಬೇಕು ಅದೇ ಸಾಕು! ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು ಕಿರಾತಕ ಬೆಡಗಿಯ ಈ ಮಾತು…​

    ಸಹೋದರಿಯಿಂದಲೇ ಶೋಯಿಬ್​​ ಮಲಿಕ್ ಅಸಲಿ ಮುಖ ಬಯಲು! ಸಾನಿಯಾ ಜತೆ ಡಿವೋರ್ಸ್​ಗೆ ಇದೇ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts