‘ಪಾರ್ವತಿ’ಯನ್ನು ದತ್ತು ಪಡೆದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​

Shivarajkumar
Published on

ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಇದೀಗ ಆನೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಂದರೆ, ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.

ಈ ಮೊದಲು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ನಟ ಚಿಕ್ಕಣ್ಣ ಸೇರಿ ಕ್ರಿಕೆಟರ್​ಗಳಾದ ಎಂ.ಎಸ್​ ಧೋನಿ, ಜಾವಗಲ್​ ಶ್ರೀನಾಥ್​, ಜಹೀರ್​ ಖಾನ್​, ಅನಿಲ್​​ ಕುಂಬ್ಳೆ ಹಾಗೂ ಹಲವು ರಾಜಕಾರಣಿಗಳೂ ಸಂಗ್ರಹಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಇದೀಗ ಆ ಸಾಲಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಸಹ ಸೇರ್ಪಡೆಯಾಗಿದ್ದು, ಆಗಸ್ಟ್​ 20ರಿಂದ 2021ರ ಆಗಸ್ಟ್ 19ರ ವರೆಗೂ ಆ ಆನೆ ಶಿವಣ್ಣ ದತ್ತು ಪಡೆದಿದ್ದಾರೆ. ಅದರ ಆರೈಕೆಗೆ ಒಟ್ಟು 75 ಸಾವಿರ ರೂ ಮೊತ್ತವನ್ನೂ ನೀಡಿದ್ದಾರೆ.

ಪ್ರಾಣಿ ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ಶಿವರಾಜ್​ಕುಮಾರ್ ಅವರ ಆನೆ ದತ್ತು ಪಡೆಯುವಿಕೆ ಸಾಕಷ್ಟು ಮಂದಿಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net