Video: ಟ್ರೆಕ್ಕಿಂಗ್​ ವೇಳೆ ಮಣ್ಣಲ್ಲಿ ಸಿಲುಕಿದ ಪ್ರಜ್ವಲ್​ ದೇವರಾಜ್​ ಜಿಪ್ಸಿ!

prajwal
Published on

ಕರೊನಾ ಲಾಕ್​ಡೌನ್​ ಮುಗಿಯುತ್ತಿದ್ದಂತೆ, ಮನೆಯಲ್ಲಿಯೇ ಕುಳಿತಿದ್ದ ಸಿನಿಮಾ ಮಂದಿ ಮನೆಯಿಂದ ಆಚೆ ಬಂದು ಬಗೆಬಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಿಸ್​ ಮಾಡಿಕೊಂಡಿದ್ದ ಕ್ಷಣಗಳನ್ನು ಮತ್ತೆ ಕೊಂಚ ಜಾಗರೂಕರತೆಯಿಂದಲೇ ಸವಿಯುತ್ತಿದ್ದಾರೆ.

ಇತ್ತೀಚೆಗಷ್ಟೇ ನಟ ದಿಗಂತ್​ ಮಂಚಾಲೆ ಮತ್ತು ಐಂದ್ರಿತಾ ರೇ ಸೈಕಲ್​ ಏರಿ ಎಲ್ಲೆಂದರೆಲ್ಲಿ ಸುತ್ತಾಡಿ ಬಂದಿದ್ದರು. ಬೆಟ್ಟಗುಡ್ಡ ಏರಿ ಇಳಿದಿದ್ದರು. ಅದೇ ರೀತಿ ಇತ್ತೀಚೆಗಷ್ಟೇ ನಟ ಪ್ರಜ್ವಲ್​ ದೇವರಾಜ್ ​ಸಹ ಜಿಪ್ಸಿ ಏರಿ ಟ್ರೆಕ್ಕಿಂಗ್​ ಹೋಗಿದ್ದರು. ಆದರೆ ಕಡಿದಾದ ರಸ್ತೆಯಲ್ಲಿ ಜಿಪ್ಸಿ ಗಾಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸಬೇಕಾಯಿತು. ಅದರ ಕಿರು ವಿಡಿಯೋವೊಂದನ್ನು ನಟ ಪ್ರಜ್ವಲ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net