ಬರ್ತ್​ಡೇ ಆಚರಣೆಗೆ ಡಾಲಿ ಧನಂಜಯ್​ ಬ್ರೇಕ್​!

Dhananjay
Published on

ಕರೊನಾ ಹಿನ್ನೆಲೆಯಲ್ಲಿ ಸ್ಟಾರ್ ಕಲಾವಿದರು ಜನ್ಮದಿನಕ್ಕೆ ಬ್ರೇಕ್​ ಹಾಕಿದ್ದಾರೆ. ಇದೀಗ ನಟ ಧನಂಜಯ್ ಸಹ ಜನ್ಮದಿನ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಮನೆಯಿಂದಲೇ ಹರಸಿ ಹಾರೈಸಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ.

ಈ ಮೊದಲು ಸಿನಿಮಾ ಕಲಾವಿದರ ಜನ್ಮದಿನ ಎಂದರೆ ಅದು ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಬಗೆಬಗೆ ಕೇಕ್​ ತಂದು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡುತ್ತಾರೆ. ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಾರೆ. ಆದರೆ, ಈಗ ಎಲ್ಲೆಡೆ ಕರೊನಾ ಹಾವಳಿ ಇರುವುದರಿಂದ ಸೋಷಿಯಲ್​ ಡಿಸ್ಟನ್ಸಿಂಗ್​ ಕಾಯ್ದುಕೊಳ್ಳುವುದು ಕಡ್ಡಾಯ. ಈ ನಿಮಿತ್ತ ಹಬ್ಬ ಹರಿದಿನಗಳನ್ನೂ ಸರಳವಾಗಿ ಆಚರಣೆ ಮಾಡಿಕೊಳ್ಳಲಾಗುತ್ತದೆ.

ಹಾಗಾಗಿ ಕರೊನಾ ಹಿನ್ನೆಲೆಯಲ್ಲಿ ನಟ ಧನಂಜಯ ಇದೀಗ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡ ಧನಂಜಯ್, ‘ಪ್ರತಿ ವರ್ಷ ಆಗಸ್ಟ್ 23ಕ್ಕೆ ವಿಭಿನ್ನ ರೀತಿಯಲ್ಲಿ ಶುಭಾಶಯ ಕೋರುತ್ತ ಬಂದಿದ್ದೀರಿ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇರುವುದರಿಂದ ನಾನು ಅದ್ದೂರಿ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ನನ್ನ ಮನೆ ಬಳಿಯೂ ಯಾರು ಬರಬೇಡಿ. ಏಕೆಂದರೆ ನಾನು ಮನೆಯಲ್ಲಿ ಇರುವುದಿಲ್ಲ. ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಕಡ್ಡಾಯ. ಆದಷ್ಟು ಬೇಗ ಈ ಕರೊನಾ ತೊಲಗಲಿ. ಮತ್ತ ಎಂದಿನಂತೆ ಅದ್ಧೂರಿಯಾಗಿಯೇ ಬರ್ತ್​ಡೇ ಆಚರಿಸಿಕೊಳ್ಳೋಣ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net